ಬೆಂಗಳೂರು : ತಾಯಿಯ ಹಾಲು ಮಕ್ಕಳಿಗೆ ತುಂಬಾ ಒಳ್ಳೇಯದು ಎನ್ನುತ್ತಾರೆ. ಆದರೆ ಕೆಲವು ತಾಯಂದಿರಲ್ಲಿ ತಮ್ಮ ಮಗುವಿಗೆ ಬೇಕಾಗುವಷ್ಟು ಹಾಲು ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಗುವಿಗೆ ಸರಿಯಾದ ಎದೆಹಾಲು ಸಿಗದೆ ಅದರ ಬೆಳೆವಣೆಗೆ ಕುಂಠಿತವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ.
ಸೊಂಪು ತಾಯಿ ಹಾಲನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಬಾಣಂತಿಯರು ತಿನ್ನುವುದರಿಂದ ಚೆನ್ನಾಗಿ ಎದೆಹಾಲು ಉತ್ಪತ್ತಿಯಾಗುತ್ತದೆ. 2 ಚಮಚ ಸೊಂಪನ್ನು 2 ಗ್ಲಾಸ್ ಗೆ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ತಣ್ಣಗಾದ ಮೇಲೆ ಸ್ವಲ್ಪ ಸಕ್ಕರೆ ಸೇರಿಸಿ ಊಟ ಆದ ಮೇಲೆ ಕುಡಿಯಿರಿ. ಹೀಗೆ ಪ್ರತಿದಿನ 3 ಬಾರಿ ಮಾಡಿ,
2 ಚಮಚ ಮೆಂತ್ಯಕಾಳನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಆ ನೀರಿನ ಜೊತೆಗೆ ಆ ಕಾಳನ್ನು ಅಗೆದು ತಿನ್ನಿ. ಬಾಣಂತಿಯರು ಹೀಗೆ ಮಾಡಿದರೆ ಎದೆ ಹಾಲು ಚೆನ್ನಾಗಿ ಉತ್ಪತ್ತಿಯಾಗುತ್ತದೆ.
ಜೀರಿಗೆ ಕಷಾಯ ಕುಡಿಯುವುದರಿಂದ ಬಾಣಂತಿಯರಲ್ಲಿ ಎದೆಹಾಲು ಉತ್ಪತ್ತಿಯಾಗುತ್ತದೆ. 1 ಚಮಚ ಜೀರಿಗೆ ಪುಡಿ ಹಾಗೂ 1 ಚಮಚ ಹಸುವಿನ ತುಪ್ಪ ಸೇರಿಸಿಕೊಂಡು ಪ್ರತಿದಿನ 2 ಬಾರಿ ತಿನ್ನಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.