ಬೆಂಗಳೂರು : ತಮ್ಮ ಮಕ್ಕಳು ಬುದ್ದಿವಂತರಾಗಿರಬೇಕೆಂದು ಎಲ್ಲಾ ತಂದೆತಾಯಿಗಳು ಆಶಿಸುತ್ತಾರೆ. ಅದಕ್ಕಾಗಿ ಮಕ್ಕಳ ಜ್ಞಾಪಕ ಶಕ್ತಿ ಅಭಿವೃದ್ಧಿ ಮಾಡಲು ಮನೆಯಲ್ಲೇ ತಯಾರು ಮಾಡಿ ಈ ದ್ರವ್ಯವನ್ನು ಅವರಿಗೆ ಕುಡಿಸಿ. ಇದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಳವಾಗುತ್ತದೆ.
4 ಕಮಲದ ಎಲೆಗಳನ್ನು ಕತ್ತರಿಸಿ ಬಾಣೆಲೆಯಲ್ಲಿ ನೀರನ್ನು ಹಾಕಿ ಬೇಯಿಸಬೇಕು. ಕಮಲದ ಎಲೆ ಬೆಂದ ನಂತರ ಅದನ್ನು ಅರ್ಧ ಲೋಟ ತುಪ್ಪದಲ್ಲಿ 3 ದಿನಗಳ ಕಾಲ ಇಡಿ ಆಮೇಲೆ ಅದನ್ನು ಒಂದು ಪಿಂಗಾಣಿ ಮಾತ್ರೆಗೆ ವರ್ಗಾಯಿಸಿ. ಮಕ್ಕಳು ಶಾಲೆಗೆ ಹೋಗುವ ಮುನ್ನ 2 ಚಮಚ ಈ ಮಿಶ್ರಣವನ್ನು ಅವರಿಗೆ ಕುಡಿಸಿ.