ಬೆಂಗಳೂರು : ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಆದ ಗಾಯಗಳು ಗುಣವಾದರೂ ಅದರ ಕಲೆ ಹಾಗೇ ಉಳಿದುಕೊಳ್ಳುತ್ತದೆ. ಇದು ಕೈ ಕಾಲಿನ ಅಂದವನ್ನು ಕೆಡಿಸುತ್ತದೆ. ಫ್ಯಾಶನ್ ಡ್ರೆಸ್ ಗಳನ್ನು ತೊಡುವಾಗ ಮುಜುಗರಕ್ಕೊಳಗಾಗುತ್ತಾರೆ. ಈ ಕಲೆಗಳನ್ನು ಕೆಲವು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.
ಒಂದು ಲಿಂಬೆಹಣ್ಣಿನ ರಸವನ್ನು ಹತ್ತಿಯುಂಡೆಯ ಸಹಾಯದಿಂದ ತೆಗೆದುಕೊಂಡು ಕಲೆ ಇರುವ ಭಾಗದ ಮೇಲೆ ನೇರವಾಗಿ ತಾಕುವಂತೆ ಹತ್ತು ನಿಮಿಷ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕಲೆ ಮಾಯವಾಗುವವರೆಗೂ ನಿತ್ಯವೂ ಈ ವಿಧಾನವನ್ನು ಅನುಸರಿಸಿ.
2 ಚಮಚ ಜೇನುತುಪ್ಪ ಹಾಗೂ 2 ಚಮಚ ಅಡುಗೆ ಸೋಡಾದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಲೆಯಿರುವ ಜಾಗದ ಮೇಲೆ ಹಚ್ಚಿ ಮಸಾಜ್ ಮಾಡಿ ಮೂರು ನಿಮಿಷ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.