ಬೆಂಗಳೂರು : ಕೂದಲು ಉದ್ದವಾಗಿ ಬೆಳೆಸಬೇಕೆಂಬ ಆಸೆ ಹಲವರಿಗಿದೆ. ಆದರೆ ಕೂದಲು ಕವಲೊಡೆದರೆ ಉದುರಿ ಹೋಗುತ್ತದೆ. ಈ ಸೀಳು ಕೂದಲು ಸಮಸ್ಯೆಗೆ ಪರಿಹರಿಸಲು ಈ ಹಣ್ಣಿನ ಪೇಸ್ಟ್ ಹಚ್ಚಿಕೊಳ್ಳಿ.
ಪಪಾಯ ಅಥವಾ ಪರಂಗಿಹಣ್ಣು ಕೂದಲು ಕವಲೊಡೆಯುವುದನ್ನು ತಡೆಯುತ್ತದೆ. ಇದು ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ನಿಮ್ಮ ನೆತ್ತಿಯ ಮತ್ತು ಕೂದಲುಗಳಲ್ಲಿ ರಕ್ತ ಪರಿಚಲನೆಯು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ನೈಸರ್ಗಿಕ ಎಣ್ಣೆ ಇರುವ ಸಬ್ಮಮ್ ಉತ್ಪಾದನೆಯು ಹೆಚ್ಚಾಗುವ ವಿಟಮಿನ್ ಎ ಯನ್ನು ಇದು ಹೊಂದಿದೆ. ನಿಮ್ಮ ನೆತ್ತಿ ಮತ್ತು ಕೂದಲು ಕಿರುಚೀಲಗಳನ್ನು ತೇವಗೊಳಿಸಿಕೊಂಡು, ಕೂದಲು ಬೆಳವಣಿಗೆ ಸಹಾಯ ಮಾಡುತ್ತದೆ.
ಒಂದು ಸಿಪ್ಪೆ ತೆಗೆದ ಪಪಾಯ ಮತ್ತು ಮೊಸರನ್ನು ಚೆನ್ನಾಗಿ ರುಬ್ಬಿ,ಮಿಶ್ರಣ ಮಾಡಿ,ನಂತರ ಕೂದಲಿಗೆ ಲೇಪಿಸಿ. ಇದನ್ನು 30-45 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.