ಬೆಂಗಳೂರು : ಮಗುವಿನ ತ್ವಚೆ ತುಂಬಾ ನಾಜೂಕಾಗಿರುವುದರಿಂದ ಅವರನ್ನು ಮೂರು ತಿಂಗಳುಗಳ ಕಾಲ ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರಿಗೆ ಚರ್ಮದ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ಮಗುವಿಗೆ ಚರ್ಮಕ್ಕೆ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವ ಬದಲು ಮನೆಯಲ್ಲೇ ಅವರಿಗೆ ಬೇಕಾಗುವ ವಸ್ತುಗಳನ್ನು ಮಾಡಿ ಬಳಸಿರಿ. ಇದರಿಂದ ಮಗುವಿಗೆ ಯಾವ ತರಹದ ಚರ್ಮದ ಸಮಸ್ಯೆಗಳು ಬರೋದಿಲ್ಲ.
ಮಗುವಿಗೆ ಸ್ನಾನಕ್ಕೆ ಕೆಮಿಕಲ್ ಯುಕ್ತ ಸೋಪುಗಳನ್ನು ಬಳಸುವ ಬದಲು ಮನೆಯಲ್ಲೇ ಅದನ್ನು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಯಿರಿ. ಮೊದಲಿಗೆ 1 ಕಪ್ ಹೆಸರು ಕಾಳನ್ನು ಚೆನ್ನಾಗಿ ಹುರಿದು ಪುಡಿಮಾಡಿ (ಹೆಸರುಕಾಳು ಬಳಸಲು ಇಷ್ಟವಿರದವರು ಅದರ ಬದಲು ಮೆಂತ್ಯ ಕಾಳನ್ನು ಬಳಸಬಹುದು) ಅದಕ್ಕೆ 1ಚಮಚ ಶುದ್ದ ಅರಶಿನ ಪುಡಿ, 1 ಚಿಟಿಕೆ ಲಾವಂಚ ಹಾಗು ಸ್ವಲ್ಪ ಹಸುವಿನ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಇದನ್ನು ಪ್ರತಿದಿನ ಮಗುವಿನ ಸ್ನಾನಕ್ಕೆ ಬಳಸಿದರೆ ಮಗುವಿಗೆ ಯಾವುದೇ ಚರ್ಮದ ಸಮಸ್ಯೆ ಬರುವುದಿಲ್ಲ ಹಾಗೆ ಮಗುವಿನ ತ್ವಚೆ ಹೊಳಪಿನಿಂದ ಕೂಡಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ