Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲು ಉದುರುವಿಕೆಗೆ ಈರುಳ್ಳಿಯೇ ರಾಮಬಾಣ

ಕೂದಲು ಉದುರುವಿಕೆಗೆ ಈರುಳ್ಳಿಯೇ ರಾಮಬಾಣ
Bangalore , ಗುರುವಾರ, 2 ಫೆಬ್ರವರಿ 2017 (10:31 IST)
ಬೆಂಗಳೂರು: ಹಲವರಿಗೆ ಇದೊಂದು ಸಮಸ್ಯೆ. ತಲೆ ಬಾಚಿಕೊಂಡರೆ ಸಾಕು ಬಾಚಣಿಗೆ ತುಂಬಾ ಕೂದಲು. ಇನ್ನೂ ನಲ್ವತ್ತರ ಹರೆಯ ದಾಟಿಲ್ಲ. ಆಗಲೇ ಬಾಂಡ್ಲಿ ತಲೆ. ಕೂದಲು ಉದುರುವುದು ನಿಲ್ಲಲು ಏನು ಮಾಡಬೇಕು?

 
ಇದಕ್ಕೆ ರಾಮಬಾಣ ಅಡುಗೆಗೆ ಬಳಸುವ ಈರುಳ್ಳಿ. ಈರುಳ್ಳಿಯಲ್ಲಿ ಸಲ್ಫರ್ ನ ಅಂಶ ಜಾಸ್ತಿಯಿರುವುದರಿಂದ ಕೂದಲಿನ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಇದರಿಂದ ಸೀಳು ಕೂದಲು ಮತ್ತು ಉದುರುವಿಕೆ ಕೂಡಾ ನಿಯಂತ್ರಣಕ್ಕೆ ಬರುವುದು.

ಈರುಳ್ಳಿಯ ರಸವನ್ನು ಕೂದಲುಗಳಿಗೆ ಹಚ್ಚಿಕೊಂಡು ಮಸಾಜ್ ಮಾಡುತ್ತಿದ್ದರೆ ಕೂದಲು ಉದುರುವಿಕೆ ನಿಲ್ಲುವುದು. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಅಂಶ ತಲೆ ಹೊಟ್ಟಿನ ಸಮಸ್ಯೆಗೆ ಪರಿಹಾರ ಒದಗಿಸುವುದು.

ಈರುಳ್ಳಿ ಕಾಣುವಾಗ ಎಷ್ಟು ಹೊಳೆಯುತ್ತವೆಯೋ ಹಾಗೆಯೇ ನಿಮ್ಮ ಕೂದಲಿಗೆ ಹೊಳಪು ನೀಡಲೂ ಇದರ ರಸವನ್ನು ಹಚ್ಚಿಕೊಳ್ಳಬಹುದು. ಅಲ್ಲದೆ ಬೇಗನೇ ಕೂದಲು ಬೆಳ್ಳಗಾಗುವ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ.

ಎಲ್ಲಕ್ಕಿಂತ ಪ್ರಮುಖ ಅಂಶವೆಂದರೆ ಈರುಳ್ಳಿಗೆ ತಲೆ ಮತ್ತು ಕುತ್ತಿಗೆ ಭಾಗದಲ್ಲಿ ಬರಬಹುದಾದ ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯವಿದೆಯಂತೆ. ಅಲ್ಲದೆ ತಲೆ ಹೇನು ಸಮಸ್ಯೆಗೂ ಇದರ ರಸವನ್ನು ಬಳಸಬಹುದು. ಇದು ನಮ್ಮ ತಲೆಯ ಭಾಗದಲ್ಲಿ ರಕ್ತ ಸಂಚಾರ ಸುಗಮಗೊಳಿಸುವುದರಿಂದ ಕೂದಲೂ ಸಮೃದ್ಧವಾಗಿ ಬೆಳೆಯಲು ಕಾರಣವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂಗಿನಲ್ಲಿ ಸದಾ ವರ್ಷಕಾಲವೇ? ಈ ಕಾರಣಗಳಿರಬಹುದು!