Webdunia - Bharat's app for daily news and videos

Install App

ದಿನಕ್ಕೆರಡು ಲವಂಗ, ಎರಡು ಬಾದಾಮಿ ಸೂತ್ರ

Webdunia
ಶುಕ್ರವಾರ, 20 ಆಗಸ್ಟ್ 2021 (14:56 IST)
ಇದು ಆಯುರ್ವೇದದಲ್ಲೂ ಉಲ್ಲೇಖಿತವಾಗಿರುವ, ವಿದೇಶಿ ಅಧ್ಯಯನಗಳೂ ಖಚಿತಪಡಿಸಿರುವ ಮಾಹಿತಿ. ದಿನಕ್ಕೆರಡು ಲವಂಗ ಮತ್ತು ಎರಡು ಬಾದಾಮಿ ದಿನನಿತ್ಯ ಸೇವಿಸಿದರೆ ನಿಮಗೆ ಸೆಕ್ಸ್ ಬಂಧಿತ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಇದೊಂದು ಕಂಟೆಂಪರರಿ ಸೂತ್ರ. ಅದೇನು ಎಂದರೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ನೆನಸಿಟ್ಟ ಎರಡು ಅಥವಾ ನಾಲ್ಕು ಬಾದಾಮಿ ಸೇವಿಸುವುದು. ಮಧ್ಯಾಹ್ನ ಊಟದ ನಂತರ ಬಾಯಿಯ ಪರಿಮಳಕ್ಕೆ ಎರಡು ಲವಂಗ ಎಸೆದುಕೊಂಡು ಅದನ್ನು ನಿಧಾನವಾಗಿ ಜಗಿದು ನುಂಗುವುದು. ಇದರಿಂದ ಸಿಗುವ ಆರೋಗ್ಯ ಲಾಭಗಳನ್ನು ನೀವು ಊಹಿಸಲಾರಿರಿ.
ಎರಡು ಲವಂಗ

ಆಯುರ್ವೇದದಲ್ಲಿ ಲವಂಗಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಜೀವಸತ್ವಗಳ ಜೊತೆಗೆ ಇತರ ಖನಿಜಗಳು ಲವಂಗದಲ್ಲಿ ಕಂಡುಬರುತ್ತವೆ. ಸತು, ತಾಮ್ರ, ಮೆಗ್ನೀಸಿಯಮ್ ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದಲ್ಲದೆ, ಲವಂಗದಲ್ಲಿ ಪ್ರೋಟೀನ್, ಕಬ್ಬಿಣ, ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ ಮತ್ತು ಸೋಡಿಯಂ ಆಮ್ಲ ಹೇರಳವಾಗಿ ಕಂಡುಬರುತ್ತವೆ.
ಲವಂಗವನ್ನು ನಿಯಮಿತವಾಗಿ ಸೇವಿಸುವುದರಿಂದ ಲೈಂಗಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಆದ್ದರಿಂದ, ಯಾವುದೇ ಲೈಂಗಿಕ ಸಮಸ್ಯೆಗಳನ್ನು ಹೊಂದಿರುವ ಪುರುಷರು ಖಂಡಿತವಾಗಿಯೂ ಲವಂಗವನ್ನು ಸೇವಿಸಬೇಕು, ಇದು ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ಪುರುಷ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಲವಂಗದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಸತುವು ಖನಿಜಗಳು ಸಮೃದ್ಧವಾಗಿವೆ. ಪುರುಷರ ಆರೋಗ್ಯಕ್ಕೆ ಇವು ಅಗತ್ಯ ಅಂಶಗಳಾಗಿವೆ. ಇದು ಫ್ಲೇವನಾಯ್ಡ್ಗಳು, ಮ್ಯಾಂಗನೀಸ್ ಮತ್ತು ಯುಜೆನಾಲ್ ಅನ್ನು ಹೊಂದಿರುತ್ತದೆ, ಇದು ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ.
ಲವಂಗವು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಕಾಯಿಲೆಗಳನ್ನು ತಡೆಯುತ್ತದೆ. ಲವಂಗವು ಫೈಬರ್ನಿಂದ ತುಂಬಿರುತ್ತದೆ. ಇದು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಸಿ ಮತ್ತು ಕೆಲವು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇದು ದೇಹದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಹಾಗೂ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎರಡು ಬಾದಾಮಿ
ದಿನಕ್ಕೆ ಎರಡು ಬಾರಿ ಬಾದಾಮಿ ತಿನ್ನುವುದರಿಂದ ಚಯಾಪಚಯದ ಪ್ರಕ್ರಿಯೆ ಸುಧಾರಿಸುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಬಾದಾಮಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಬಹುದು. ಜತೆಗೆ ಇದು ಮಧುಮೇಹದ ಬೆಳವಣಿಗೆಯನ್ನು ತಡೆಯಲು ಅಥವಾ ಅದರ ಪರಿಣಾಮವನ್ನು ಮೊಟಕುಗೊಳಿಸಲು ಸಹಾಯ ಮಾಡುತ್ತದೆ. ಹೃದಯದ ರಕ್ಷಣೆಗೆ ಬೇಕಾದ ಎಚ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳುವಲ್ಲಿಯೂ ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ.
ಬಾದಾಮಿ ಬೀಜಗಳಲ್ಲಿ ಶೇ.16 ರಷ್ಟು ಫೈಬರ್ ಅಂಶ, ವಿಟಮಿನ್ ಇ, ಶೇ.20ರಷ್ಟು ಮೆಗ್ನೀಶಿಯಂ ಹಾಗೂ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಷಿಯಮ್ ಅಂಶಗಳನ್ನು ಒಳಗೊಂಡಿರುತ್ತದೆ. ಹದಿಹರೆಯದ ಮತ್ತು ವಯಸ್ಕರಲ್ಲಿ ಪೌಷ್ಟಿಕಾಂಶ ಭರಿತ ಆಹಾರ ಮತ್ತು ವ್ಯಾಯಾಮ ಸೇರಿದಂತೆ ಜೀವನಶೈಲಿಯಲ್ಲಿ ಆಗುವ ಹಲವು ಬದಲಾವಣೆಗಳನ್ನು ಸುಧಾರಿಸಲು ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹ ತಡೆಯುವಲ್ಲಿಯೂ ಬಾದಾಮಿ ಪ್ರಮುಖ ಪಾತ್ರವಹಿಸುತ್ತದೆ.
ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ  ಸೆಕ್ಸ ಲೈಫ್ ಚುಟುಕಾಗಿದೆ. ನಿಮ್ಮಲ್ಲಿ ಕೊಲೆಸ್ಟ್ರಾಲ್ ಕಡಿತಗೊಳಿಸಿ, ಮಧುಮೇಹ ನಿಯಂತ್ರಿಸಿ, ರಕ್ತ ಪರಿಚಲನೆ ಚುರುಕಾಗಿಸಿವುದರಿಂದ ಬಾದಾಮಿಯು ನಿಮ್ಮ ಲೈಂಗಿಕ ಜೀವನವನ್ನೂ ಉತ್ತೇಜಿಸಿದಂತಾಗುತ್ತದೆ ಎಂದರ್ಥ. ಬಾದಾಮಿಯಲ್ಲಿ ಸಾಕಷ್ಟು ಪ್ರೊಟೀನ್ ಇರುತ್ತದೆ.
ಇದನ್ನು ಸೇವಿಸಿದಾಗ ಇತರ ಕಾರ್ಬೊಹೈಡ್ರೇಟ್ಗಳ ಅಗತ್ಯ ಬೀಳುವುದಿಲ್ಲ. ಕಾರ್ಬೊಹೈಡ್ರೇಟ್ಗಳು ದೇಹದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತವೆ. ಕಾರ್ಬೊ ಬದಲು ಪ್ರೊಟೀನ್ ರಿಚ್ ಬಾದಾಮಿ ತಿನ್ನುವುದು ದೇಹವನ್ನು ಚುರುಕಾಗಿಡುತ್ತದೆ, ಹಗುರವಾಗಿಡುತ್ತದೆ ಮತ್ತು ಸಾಕಷ್ಟು ಎನರ್ಜಿಯನ್ನು ಉತ್ಪಾದಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ