ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಕೆಲವರು ಅದನ್ನು ಉಪಯೋಗಿಸುತ್ತಾರೆ. ಕಾರಣ ಅವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಎಷ್ಟು ಸಾರಿ ಬಿಡಬೇಕೆಂದುಕೊಂಡರು ಕೂಡ ಅವರಿಗೆ ಮತ್ತೆ ಮತ್ತೆ ಸಿಗರೇಟು ಸೇದಬೇಕೆನಿಸುತ್ತದೆ. ಅಂತವರು ಈ ಚಟದಿಂದ ದೂರವಾಗಬೇಕೆನಿಸಿದಾಗ ಹೀಗೆ ಮಾಡಿ
ಶುಂಠಿಯು ಆಯುರ್ವೇದದ ತುಂಬಾ ಅಮೂಲ್ಯವಾಗಿರುವ ಗಿಡಮೂಲಿಕೆ ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣ, ಉರಿಯೂತ ಶಮನಕಾರಿ ಗುಣ ಮತ್ತು ಸಲ್ಫರ್ ಅಂಶ ಉತ್ತಮವಾಗಿದೆ. ಇದು ಧೂಮಪಾನದ ಬಯಕೆ ಕಡಿಮೆ ಮಾಡುವುದು. ಸಣ್ಣ ತುಂಡು ಶುಂಠಿಯನ್ನು ಲಿಂಬೆರಸದಲ್ಲಿ ಮುಳುಗಿಸಿಡಿ ಮತ್ತು ಅದಕ್ಕೆ ಕರಿಮೆಣಸಿನ ಹುಡಿ ಹಾಕಿ. ಧೂಮಪಾನ ಮಾಡಬೇಕೆಂದು ನಿಮಗೆ ಅನಿಸಿದಾಗ ಶುಂಠಿಯ ಒಂದು ತುಂಡನ್ನು ಬಾಯಿಗೆ ಹಾಕಿಕೊಳ್ಳಿ. ಹೀಗೆ ಮಾಡುತ್ತಾ ಬಂದರೆ ಧೂಮಪಾನದ ಚಟವನ್ನು ದೂರಗೊಳಿಸಬಹುದು.
ಹಾಗೇ ಧೂಮಪಾನಿಗಳು ಸಿಗರೇಟ್ ಸೇದುವ ಮೊದಲು ಒಂದು ಲೋಟ ಹಾಲು ಕುಡಿದರೆ ಆಗ ಸಿಗರೇಟ್ ರುಚಿ ತುಂಬಾ ಕೆಟ್ಟದಾಗಿರುತ್ತದೆ ಎಂದು ಡ್ಯುಕ್ ಯೂನಿವರ್ಸಿಟಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ