ಬೆಂಗಳೂರು: ನಮ್ಮ ಸುತ್ತಮುತ್ತ ಸುಲಭದಲ್ಲಿ, ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಬಾಳೆ ಹಣ್ಣು. ಹಾಗಂತ ಬಾಳೆ ಹಣ್ಣಿನ ಬಗ್ಗೆ ಉಡಾಫೆ ಬೇಡ. ಈ ಹಣ್ಣಿನಲ್ಲಿರುವ ವಿವಿಧ ಆರೋಗ್ಯಕರ ಉಪಯೋಗಗಳು ಇನ್ಯಾವ ಹಣ್ಣಿನಲ್ಲೂ ಸಿಗದು.
ಮಲಬದ್ಧತೆ
ಮಲಬದ್ಧತೆ ಇರುವವರಿಗೆ, ಮಲ ವಿಸರ್ಜನೆ ಮಾಡುವಾಗ ಅತಿಯಾದ ಸಂಕಟ ಅನುಭವಿಸುವವರಿಗೆ ಬಾಳೆ ಹಣ್ಣು ಬೆಸ್ಟ್ ಮೆಡಿಸಿನ್. ಇದರಲ್ಲಿರುವ ಫೈಬರ್ ಅಂಶ ಮಲ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ.
ಚರ್ಮದ ಕಾಂತಿಗೆ ಉತ್ತಮ
ಮಧ್ಯ ವಯಸ್ಸು ಬಂದ ಮೇಲೆ ಅಯ್ಯೋ ನನ್ನ ಚರ್ಮ ಸುಕ್ಕುಗಟ್ಟುತ್ತಿದೆ ಎಂದು ಚಿಂತೆ ಮಾಡುವವರಿಗೆ ಬಾಳೆ ಹಣ್ಣಿನ ಸೇವನೆ ಉತ್ತಮ. ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯುವುದು ಮಾತ್ರವಲ್ಲ, ಕಾಂತಿಯುತವಾಗಿ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ಇ ಅಂಶ ಹೆಚ್ಚಿರುವುದರಿಂದ ವಯಸ್ಸಾಗುವಿಕೆಯನ್ನು ತಡೆಗಟ್ಟುವ ಕ್ರೀಂ ಆಗಿ ಬಳಕೆಯಾಗುತ್ತದೆ.
ಶಕ್ತಿ ವರ್ಧಕ
ಇಂದು ನಾವು ಶಕ್ತಿ ವರ್ಧಕಗಳಾಗಿ ಮಾರುಕಟ್ಟೆಯಿಂದ ತರುವ ಅನೇಕ ವಸ್ತುಗಳಲ್ಲಿ ಬಾಳೆ ಹಣ್ಣಿನ ಅಂಶಗಳಿವೆ. ಪ್ರತಿ ದಿನ ರಾತ್ರಿ ಮಲಗುವ ಮೊದಲು ಒಂದು ದೊಡ್ಡ ಬಾಳೆ ಹಣ್ಣು ಮತ್ತು ಒಂದು ಗ್ಲಾಸ್ ಹಾಲು ಕುಡಿದರೆ ಬೇರೆ ಹೆಲ್ತ್ ಡ್ರಿಂಕ್ ಗಳ ಅಗತ್ಯವೇ ಇಲ್ಲ.
ಸೊಳ್ಳೆಯಿಂದಲೂ ರಕ್ಷಣೆ ಪಡೀಬಹುದು!
ಬಾಳೆ ಹಣ್ಣು ಸೊಳ್ಳೆ ಕಡಿತದಿಂದಲೂ ರಕ್ಷಣೆ ನೀಡುತ್ತದೆ! ಸೊಳ್ಳೆ ಕಡಿದು ಮೈ ಮೆಲೆ ಕೆಂಪಗಿನ ಗುಳ್ಳೆ ಎದ್ದಿದ್ದರೆ, ಆ ಜಾಗಕ್ಕೆ ಸ್ವಲ್ಪ ನೀರು ಹಾಕಿ ನಂತರ ಬಾಳೆ ಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿಕೊಂಡರೆ ಉತ್ತಮ ಮನೆ ಔಷಧ. ಬಾಳೆ ಹಣ್ಣಿನ ಸಿಪ್ಪೆ, ಕಜ್ಜು, ತುರಿಕೆಯಿಂದುಂಟಾಗುವ ಗಾಯವನ್ನು ಮಾಗಿಸುವ ಗುಣ ಹೊಂದಿದೆಯಂತೆ.
ಜೀರ್ಣಕ್ರಿಯೆಗೆ
ಹಿರಿಯರು ಊಟವಾದ ಮೇಲೆ ಬಾಳೆ ಹಣ್ಣು ತಿನ್ನುವ ಸಂಪ್ರದಾಯ ಇಟ್ಟುಕೊಂಡಿರುವುದರ ಹಿಂದಿರುವ ಉದ್ದೇಶ ಜೀರ್ಣಕ್ರಿಯೆ. ಬಾಳೆ ಹಣ್ಣು ಪಚನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಉಪವಾಸ ಮಾಡುವವರು ಬಾಳೆ ಹಣ್ಣು ತಿನ್ನುವುದರ ಹಿಂದಿರುವುದರ ಉದ್ದೇಶ ಇದುವೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ