Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯೋನಿ ಆರೋಗ್ಯವಾಗಿರಲು ಮಹಿಳೆಯರು ಈ ನಿಯಮವನ್ನು ಪಾಲಿಸಲೇಬೇಕು

ಯೋನಿ ಆರೋಗ್ಯವಾಗಿರಲು ಮಹಿಳೆಯರು ಈ ನಿಯಮವನ್ನು ಪಾಲಿಸಲೇಬೇಕು
ಬೆಂಗಳೂರು , ಬುಧವಾರ, 26 ಡಿಸೆಂಬರ್ 2018 (07:11 IST)
ಬೆಂಗಳೂರು : ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ  ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದಿರಲೇಬೇಕು.

*ಮುಟ್ಟಿನ ವೇಳೆ ಧರಿಸುವ ಪ್ಯಾಡನ್ನು ಅಥವಾ ಬಟ್ಟೆಯನ್ನು ಆಗಾಗ ಬದಲಾಯಿಸುತ್ತಿರಬೇಕು. ಇಲ್ಲವಾದರೆ ಅದರಿಂದ  ಉಂಟಾಗುವ ಕೆಟ್ಟ ವಾಸನೆಯಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ.

 

* ಹತ್ತಿಯಿಂದ ತಯಾರಿಸಿದ  ಒಳಉಡುಪುಗಳನ್ನೇ ಬಳಸಬೇಕು. ಇದರಿಂದ ಯೋನಿಯಲ್ಲಿ ಸೋಂಕು ಉಂಟಾಗುವುದಿಲ್ಲ.

 

*ಒಳಉಡುಪುಗಳನ್ನು ಪ್ರತಿದಿನ ಮೃದುವಾದ ಸೋಪಿನಿಂದ ಚೆನ್ನಾಗಿ ಒಗೆಯಬೇಕು. ಇಲ್ಲವಾದರೆ ಆ ಭಾಗದಲ್ಲಿ ಅಲರ್ಜಿ ಉಂಟಾಗುತ್ತದೆ. ಹಾಗೇ ಒಳಉಡುಪುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು.

 

* ಯೋನಿಯ ಬಳಿ ಬೆಳೆಯುವ ಕೂದಲನ್ನು ಆಗಾಗ ತೆಗೆಯುತ್ತಿರಬೇಕು. ಆದರೆ ಅದಕ್ಕಾಗಿ ರೇಜರ್, ಬ್ಲೇಡ್ ಅಥವಾ ಕತ್ತರಿಗಳನ್ನು ಬಳಸಬಾರದು.

 

*ಸಂಭೋಗದ ನಂತರ ಹೆಚ್ಚಿನ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಯೋನಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗರ ದೇಹ ಸಧೃಡವಾಗಿರಲು ಈ ಮಿಲ್ಕ್ ಶೇಕ್ ಕುಡಿಯಿರಿ