ಬೆಂಗಳೂರು : ಕೆಲವರಿಗೆ ಸುಣ್ಣ, ಬಳಪ, ಚಾಕ್ ಫೀಸ್ ತಿನ್ನೋ ಅಭ್ಯಾಸವಿರುತ್ತದೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಆರೋಗ್ಯವನ್ನು ಹಾಳು ಮಾಡುವುದರಿಂದ ಈ ಅಭ್ಯಾಸವನ್ನು ಕಡಿಮೆ ಮಾಡುವುದು ಉತ್ತಮ. ಈ ಮನೆಮದ್ದನ್ನು ಬಳಸುವುದರಿಂದ ಈ ಅಭ್ಯಾಸವನ್ನು ಕಡಿಮೆ ಮಾಡಬಹುದು.
ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ಈ ರೀತಿ ಸುಣ್ಣ, ಬಳಪ, ಚಾಕ್ ಫೀಸ್ ತಿನ್ನಬೇಕು ಎಂದೆನಿಸುತ್ತದೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಸೇವಿಸಿ.
ಹಾಗೇ ಪಚ್ಚ ಬಾಳೆಹಣ್ಣನ್ನು ಸಿಪ್ಪೆ ಸುಲಿದು ಸಣ್ಣದಾಗಿ ಕಟ್ ಮಾಡಿಕೊಂಡು ಅದಕ್ಕೆ 1 ಟೀ ಸ್ಪೂನ್ ಶುದ್ಧ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಬೇಕು. ದಿನಕ್ಕೆ 2 ಬಾರಿ ತಿನ್ನಿ. ಹೀಗೆ ಕ್ರಮೇಣ ಮಾಡಿದರೆ ಈ ಅಭ್ಯಾಸವನ್ನು ಬಿಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.