ಬೆಂಗಳೂರು : ಪ್ರಪಂಚದಲ್ಲಿ ಎಲ್ಲಿನೋಡಿದರೂ ಕಲಬೆರಕೆ ವಸ್ತುಗಳು ಆರ್ಭಟ ಹೆಚ್ಚಾಗಿದೆ. ನಾವು ಕುಡಿಯುವ,ತಿನ್ನುವ ಪ್ರತಿಯೊಂದು ವಸ್ತುವೂ ಕಲಬೆರಕೆಯಾಗಿ ಮಾರಾಟವಾಗುತ್ತಿವೆ. ಅದರಲ್ಲಿ ಜೇನು ತುಪ್ಪವು ಒಂದು. ಈ ಜೇನು ತುಪ್ಪವನ್ನು ಅಸಲಿಯೊ ನಕಲಿಯೋ ಎಂದು ನಾವು ತಿಳಿದುಕೊಳ್ಳಬಹುದು. ಈ ಮೂರು ವಿಧಾನಗಳಿಂದ ಅದನ್ನು ಪರೀಕ್ಷಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
1. ಒಂದು ಟೇಬಲ್ ಸ್ಪೂನ್ ಜೇನನ್ನು ಒಂದು ಗ್ಲಾಸ್ ‘ಟೀ’ ಯಲ್ಲಿ ಹಾಕಿ, ನೀವು ಹಾಕಿದ ಜೇನು ನಕಲಿ ಆಗಿದ್ದರೆ ಒಡನೆಯೇ ಕರಗುತ್ತದೆ.ಅಸಲಿ ಜೇನಾದರೆ ಗ್ಲಾಸಿನ ತಳಭಾಗ ಸೇರುತ್ತದೆ.ಅಷ್ಟೇ ಅಲ್ಲದೆ ನೀರಿನಲ್ಲಿ ಬೇಗ ಕರುಗುವುದಿಲ್ಲ.
2. ಒಂದು ಹತ್ತಿ ಉಂಡೆಯನ್ನು ಜೇನಿನಲ್ಲಿ ಮುಳುಗಿಸಿ ತೆಗೆಯಬೇಕು. ನಂತರ ಬೆಂಕಿ ಕಡ್ಡಿ ಗೀರಿ ಬೆಂಕಿಯನ್ನು ಆ ಉಂಡೆಗೆ ತಾಗಿಸಿದರೆ, ಅಸಲಿ ಜೇನಾಗಿದ್ದರೆ ಹತ್ತಿಉಂಡೆ ಉರಿಯುತ್ತದೆ.ಒಂದು ವೇಳೆ ನೀವು ಹತ್ತಿ ಉಂಡೆಯನ್ನು ಅದ್ದಿತೆಗೆದ ಜೇನು ನಕಲಿ ಆಗಿದ್ದರೆ ಹತ್ತಿ ಉಂಡೆ ಉರಿಯುವುದಿಲ್ಲ.
3. ಒಂದು ತೊಟ್ಟು ಜೇನನ್ನು ಉಗುರಿನ ಮೇಲೆ ಹಾಕಬೇಕು. ಜೇನು ಹರಿದು ಹೋದರೆ ಅದು ನಕಲಿ ಜೇನೆಂದು ತಿಳಿಯಬೇಕು.ಒಂದು ವೇಳೆ ಸ್ಥಿರವಾಗಿದ್ದರೆ ಅದು ಅಸಲಿ ಜೇನೆಂದು ತಿಳಿಯಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ