ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಒಂದು ಸಮಸ್ಯೆಯಾಗಿದೆ. ನಮ್ಮ ಜೀವನಶೈಲಿ, ಹಾರ್ಮೋನ್ ಗಳ ಸಮಸ್ಯೆ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಆಹಾರವನ್ನು ಸೇವಿಸಿ.
ಬಾದಾಮಿ, ಒಣದ್ರಾಕ್ಷಿ, ಅಂಜೂರ, ಪಿಸ್ತಾ ಈ ಡ್ರೈಫುಟ್ಸ್ ಗಳಲ್ಲಿ ಲಭ್ಯವಿರುವ ಪೋಷಕಾಂಶಗಳು ನಿಮ್ಮ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತವೆ. ಆದಕಾರಣ ಪ್ರತಿದಿನ 6 ಬಾದಾಮಿ, 10 ಒಣದ್ರಾಕ್ಷಿ, 1 ಅಂಜೂರ ಮತ್ತು 7 ಪಿಸ್ತಾವನ್ನು ಸೇವಿಸುವುದರಿಂದ ನಿಮ್ಮ ಕೂದಲನ್ನು ಕಪ್ಪಾಗಿರುವಂತೆ ಮಾಡುತ್ತವೆ.