ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಆಹಾರ ಪದ್ಧತಿಗಳು ಒಂದು ಕಾರಣವಾಗಿದೆ. ಆದ್ದರಿಂದ ಕಿಡ್ನಿಯ ಆರೋಗ್ಯವನ್ನು ಹೆಚ್ಚಿಸುವಂತಹ ಆಹಾರವನ್ನು ಸೇವಿಸಿ. ಈ ಕೆಳಗಿನ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ಕಿಡ್ನಿಯ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲವಂತೆ.
ಕ್ಯಾಬೇಜ್ : ಈ ತರಕಾರಿಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ನಾರು ಅಧಿಕ ಪ್ರಮಾಣದಲ್ಲಿದೆ. ಇದು ಕಿಡ್ನಿಯಲ್ಲಿರುವ ತ್ಯಾಜ್ಯವನ್ನು ಹೊರ ಹಾಕುತ್ತದೆ. ಎಲೆಕೋಸು ಕಿಡ್ನಿಯನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ.
ಈರುಳ್ಳಿ : ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕಿಡ್ನಿಯಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಇದು ಕಿಡ್ನಿಯಲ್ಲಿ ಹರಳುಗಟ್ಟಿರುವ ಕಲ್ಲನ್ನು ಕರಗಿಸುತ್ತದೆ.
ಕ್ಯಾರೆಟ್ : ಈ ತರಕಾರಿಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳ ಪ್ರಮಾಣ ಅತ್ಯಧಿಕವಾಗಿದೆ. ಇದು ಕಿಡ್ನಿ ಸೋಂಕನ್ನು ಕಡಿಮೆಗೊಳಿಸುತ್ತದೆ.
ಮೂಲಂಗಿ : ಈ ತರಕಾರಿಯಲ್ಲಿ ಹೆಚ್ಚು ಪೌಷ್ಟಿಕಾಂಶಗಳು ಮತ್ತು ಕೆಲವು ಔಷಧೀಯ ಗುಣಗಳಿವೆ. ಇದನ್ನು ನಿಯಮಿತವಾಗಿ ಸೇವಿದರೆ ಕಿಡ್ನಿ ಸ್ವಚ್ಛವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.