ಬೆಂಗಳೂರು : ಮಗು ಜನಿಸಿದ ನಂತರ ಮಗುವಿಗೆ ನೀಡುವ ಒಂದು ಅತ್ಯಮೂಲ್ಯ ಉತ್ತಮ ಆಹಾರವೆಂದರೆ ತಾಯಿಯ ಎದೆಹಾಲಾಗಿದೆ. ಇದು ಮಗುವಿನ ಸಕಲ ರೋಗಗಳನ್ನು ನೀಗುವ ಅದ್ಭುತ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ಮಗುವಿನ ಸರ್ವತೋಮುಖ ಬೆಳಗವಣಿಗೆಗೆ ಕಾರಣವಾಗಿದೆ.
ಆದರೆ ಕೆಲವು ತಾಯಂದಿರು ಮಗು ಜನಿಸಿದ ಕೂಡಲೇ ಉದ್ಯೋಗಕ್ಕೆ ತೆರಳುತ್ತಾರೆ ಮತ್ತು ಕೆಲವೊಂದು ಸಂದರ್ಭಗಳಲ್ಲಿ ಅವರಿಗೆ ಮಗುವಿಗೆ ಹಾಲುಣಿಸಲು ಬೇಕಾದ ಸಮಯವಿರುವುದಿಲ್ಲ. ತಮ್ಮ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ತಮಗೆ ಅನುಕೂಲವಾಗಿರುವ ಸಮಯದಲ್ಲಿ ಮಗುವಿಗೆ ಕುಡಿಸುತ್ತಾರೆ. ಆದರೆ ನೀವು ಹಾಲನ್ನು ಈ ರೀತಿ ಬಾಟಲಿಯಲ್ಲಿ ಸಂಗ್ರಹಿಸುವ ಮುನ್ನ ಕೆಲವೊಂದು ಅಂಶಗಳತ್ತ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
*ಸ್ಟೆರಿಲೈಜ್ ಮಾಡಿದ ಪಾತ್ರೆಯಲ್ಲಿ ಹಾಲನ್ನು ಸಂಗ್ರಹಿಸಿ ಸಾಧ್ಯವಾದಷ್ಟು ತಣ್ಣಗೆಯಾಗಿ ಈ ಬಾಟಲಿಯನ್ನು ಇಡಿ.
*ಹಾಲನ್ನು ಹೊರತೆಗೆದು 4-5 ಗಂಟೆಗಳ ಒಳಗಾಗಿ ಅದನ್ನು ಕುಡಿಸಿ ಎದೆಹಾಲನ್ನು ಎಂದಿಗೂ ಕುದಿಸಬೇಡಿ ಏಕೆಂದರೆ ಇದರ ಸ್ವಾದ ಬದಲಾಗಬಹುದು *ಮಗುವಿಗೆ ಹಾಲು ಕುಡಿಸುವ ಮೊದಲು ಹಾಲು ಹಾಳಾಗಿದೆಯೇ ಎಂಬುದನ್ನು ಪರಿಶೀಲಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ