ಬೆಂಗಳೂರು : ಕೆಲಸ ಕಾರ್ಯಗಳನ್ನು ಮಾಡುವಾಗ ಮುಖದ ಮೇಲೆ ತರಚಿದ ಗಾಯಗಳಾಗುತ್ತದೆ. ಕೆಲವೊಮ್ಮೆ ಇದರ ಕಲೆ ಹಾಗೇ ಉಳಿದುಬಿಡುತ್ತದೆ. ಇದು ಮುಖದ ಅಂದವನ್ನು ಕೂಡ ಕೆಡಿಸುತ್ತದೆ. ಈ ಕಲೆಗಳನ್ನು ನಿವಾರಿಸಲು ಹೀಗೆ ಮಾಡಿ.
* ನಿಂಬೆ ಹಣ್ಣು ಗಾಯದ ಗುರುತನ್ನು ತೆಗೆಯಲು ಬಹಳ ಉಪಕಾರಿ. ನಿಂಬೆ ಹಣ್ಣಿನ ರಸವನ್ನು ಹತ್ತಿ ಉಂಡೆಯಿಂದ ತೆಗೆದುಕೊಂಡು ಗಾಯದ ಕಲೆಗಳ ಮೇಲೆ ಉಜ್ಜಿ. ಹೀಗೆ ಪ್ರತಿನಿತ್ಯ ಮಾಡಿ ಹಾಗೂ ನಿಯಮಿತವಾಗಿ ಪಾಲಿಸಿ.
* ಜೇನುತುಪ್ಪವನ್ನು ಗಾಯದ ಮೇಲೆ ಲೇಪಿಸಿ. ಇದನ್ನು ಪ್ರತಿದಿನ ಮಾಡುವುದರಿಂದ ಕೂಡ ಗಾಯದ ಕಲೆ ಮಾಯವಾಗುತ್ತದೆ.
* ಆಲೋವೆರಾ ದಲ್ಲಿ ಆಂಟಿ ಇನ್ಫ್ಲೇಮೇಟರಿ ಅಂಶಗಳಿದ್ದು ಇದು ನಮ್ಮ ಚರ್ಮಕ್ಕೆ ಬಹಳ ಉಪಯೋಗ ನೀಡುತ್ತದೆ. ಇದರಿಂದಾಗಿ ನಮ್ಮ ಸತ್ತ ಚರ್ಮ ಬಹಳ ಬೇಗನೆ ನಾಶವಾಗಿ ಹೊಸ ಚರ್ಮದ ಹುಟ್ಟು ಬಹಳ ಬೇಗನೆ ಆಗುತ್ತದೆ. ಆಲೋ ವೆರಾ ಜೆಲ್ ಅನ್ನು ಗಾಯದ ಗುರುತಿನ ಮೇಲೆ ಸರಿಯಾಗಿ ಲೇಪಿಸಿ ಗುರುತುಗಳನ್ನು ಕಡಿಮೆ ಮಾಡಿಕೊಳ್ಳಿ.