ಬೆಂಗಳೂರು : ದೇಹದ ಬಹುಮುಖ್ಯವಾದ ಅಂಗಗಳಲ್ಲಿ ಕಿಡ್ನಿಯು ಒಂದು. ಕಿಡ್ನಿ ಹಾಳಾದರೆ ಸಾವುಸಂಭವಿಸುತ್ತದೆ. ಆದ್ದರಿಂದ ಕಿಡ್ನಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಹಾಗೇ ನಿಮ್ಮ ಈ ಹವ್ಯಾಸಗಳು ಕಿಡ್ನಿಯನ್ನು ಡ್ಯಾಮೇಜ್ ಮಾಡಬಹುದು ಎಚ್ಚರ.
*ತುಂಬಾ ಪ್ರೋಟಿನ್ ಯುಕ್ತ ಆಹಾರ ಸೇವಿಸುವುದು ಕಿಡ್ನಿಗೆ ಅಪಾಯಕಾರಿ. ಅದರಲ್ಲೂ ಕೆಂಪು ಮಾಂಸ ಸೇವನೆಯಿಂದ ಕಿಡ್ನಿ ಹಾಳಾಗುತ್ತದೆ.
*ವಿಟಮಿನ್ ಡಿ6 ಹಾಗೂ ವಿಟಮಿನ್ ಡಿ ಕೊರತೆ ಕಿಡ್ನಿಗೆ ಅಪಾಯಕಾರಿ ಮತ್ತು ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿ ಮಾಡುತ್ತದೆ.
* ದೇಹಕ್ಕೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯದೇ ಇರುವುದು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ.
*ಮೂತ್ರ ವಿಸರ್ಜನೆ ಮಾಡದೆ ತಡೆದುಕೊಳ್ಳುವುದು ಕಿಡ್ನಿಗೆ ಅಪಾಯವನ್ನುಂಟು ಮಾಡುತ್ತದೆ.
*ಹೆಚ್ಚು ಉಪ್ಪು ತಿನ್ನುವುದು ಕೂಡ ಕಿಡ್ನಿಗೆ ಅಪಾಯಕಾರಿ.
*ಪ್ರತಿಯೊಂದು ಸಮಸ್ಯೆಗೂ ಮಾತ್ರೆಗಳನ್ನು ಸೇವಿಸುವುದರಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ.
*ಸಕ್ಕರೆ ಅಂಶವನ್ನು ಹೆಚ್ಚಾಗಿ ತಿನ್ನುವುದರಿಂದ ಡಯಾಬಿಟಿಸ್ ಬರುತ್ತದೆ. ಇದು ಕೂಡ ಕಿಡ್ನಿಗೆ ಅಪಾಯಕಾರಿ.
*ರಕ್ತದೊತ್ತಡ ಕಿಡ್ನಿಗೆ ಹಾನಿಯುಂಟುಮಾಡುವುದರಿಂದ ಆಗಾಗ ರಕ್ತದೊತ್ತಡವನ್ನು ಪರೀಕ್ಷಿಸುತ್ತೀರಿ.
*ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಸೇವನೆ ಕಿಡ್ನಿಗೆ ಅಪಾಯಕಾರಿ.