ತಜ್ಞರ ಪ್ರಕಾರ ಸಂಭೋಗದ ನಂತರ ಹೆಣ್ಣುಮಕ್ಕಳು ಕನಿಷ್ಠ 20 ನಿಮಿಷಗಳಾದರೂ ಹಾಸಿಗೆಯಲ್ಲಿಯೇ ಮಲಗಿರುವುದು ಒಳಿತು. ಒಂದು ಗಂಟೆ ಇದ್ದರಂತೂ ಇನ್ನು ಪರಿಣಾಮಕಾರಿ ಎನ್ನುತ್ತಾರೆ. ಯಾಕೆಂದರೆ ವೀರ್ಯಾಣು ಜನನಾಂಗದ ಮೂಲಕ ಗರ್ಭಕೋಶವನ್ನು ಸೇರಲು ಇದು ಸಹಕರಿಸುತ್ತದೆ. ಹಾಗೇ ಮೊಣಕಾಲನ್ನು ಮೇಲೆತ್ತಿರುವ ಭಂಗಿಯಲ್ಲಿ ಮಲಗಿದರೆ ಇನ್ನು ಉತ್ತಮ.
ಹಾಗೇ ಈ ಮಿಲನದ ನಂತರ ದೇಹದ ಉಷ್ಣತೆಯನ್ನು ಹೆಚ್ಚಿಸುವ ದೇಹ ದಂಡಿಸುವ ಕಾರ್ಯಗಳನ್ನು ಮಾಡಬಾರದು. ಸುದೀರ್ಘ ಓಟ, ನಡಿಗೆ, ಬಾತ್ ಟಬ್ ಸ್ನಾನ, ಇವುಗಳನ್ನು ಮಾಡಬಾರದು. ದೇಹದ ಉಷ್ಣತೆಯನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಬಾರದು.