Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್ ಹೆಚ್ಚು ಕಡಿಮೆಯಾದರೆ ಈ ಅಪಾಯಗಳು ತಪ್ಪಿದ್ದಲ್ಲ!

ಸೆಕ್ಸ್ ಹೆಚ್ಚು ಕಡಿಮೆಯಾದರೆ ಈ ಅಪಾಯಗಳು ತಪ್ಪಿದ್ದಲ್ಲ!
ಬೆಂಗಳೂರು , ಬುಧವಾರ, 30 ಮೇ 2018 (09:28 IST)
ಬೆಂಗಳೂರು: ಸೆಕ್ಸ್ ಎನ್ನುವುದು ಖುಷಿಕೊಡುವ ಚಟುವಟಿಕೆಯೇನೋ ಸರಿ. ಆದರೆ ಅತಿಯಾದರೆ ಅಮೃತವೂ ವಿಷವಂತೆ. ಹಾಗೆಯೇ ಸೆಕ್ಸ್ ಮಾಡುವಾಗ ಹೆಚ್ಚು ಕಡಿಮೆಯಾದರೆ ಈ ಅಪಾಯಗಳು ತಪ್ಪಿದ್ದಲ್ಲ!

ಯೋನಿ ಬಾತುಕೊಳ್ಳುವುದು
ಅತಿಯಾಗಿ ಸೆಕ್ಸ್ ಮಾಡುವುದು, ತುಂಬಾ ಹೊತ್ತಿನವರೆಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಹಿಳೆಯರ ಯೋನಿ ಬಾತುಕೊಳ್ಳುವ ಅಪಾಯ ಹೆಚ್ಚು. ಇದು ಅಸಹನೀಯ ನೋವಿಗೆ ಕಾರಣವಾಗಬಹುದು.

ಉರಿಯೂತ
ಯೋನಿ ಡ್ರೈ ಆಗಿರುವಾಗ ಸೆಕ್ಸ್ ನಡೆಸಿದರೆ ಆ ಭಾಗದಲ್ಲಿ ಉರಿ, ಕೆಂಪಗಾಗುವುದು ಇಂತಹ ಸಮಸ್ಯೆಗೆ ಸಿಲುಕುವಿರಿ.

ಪುರುಷರ ಗುಪ್ತಾಂಗ
ಪುರುಷರಿಗೂ ಸಮಸ್ಯೆಗಳಿದ್ದೇ ಇರುತ್ತವೆ. ಅತಿಯಾಗಿ ಸೆಕ್ಸ್ ಮಾಡುವುದರಿಂದ ವೃಷಣದ ನೋವು, ಉರಿ ಕಂಡುಬರಬಹುದು.

ಗಾಯದ ಕಲೆ
ಲೈಂಗಿಕ ಉನ್ಮಾದದಲ್ಲಿ ಕಚ್ಚಿದ ಗಾಯದ ಗುರುತು ನಂತರ ತೊಂದರೆ ಕೊಡಬಹುದು. ವಿಪರೀತ ಗಾಯವಾಗಿದ್ದರೆ ತಕ್ಷಣ ವೈದ್ಯರನ್ನು ಕಂಡು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಚರ್ಮದ ಅಲರ್ಜಿ, ನೋವಿನಿಂದ ಮುಕ್ತಿ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಮ ಆರೋಗ್ಯಕ್ಕಾಗಿ ಈ 5 ಬಿಳಿ ಆಹಾರ ಪದಾರ್ಥಗಳನ್ನು ಬಳಸದೇ ಇರುವುದು ಒಳ್ಳೆಯದು