Webdunia - Bharat's app for daily news and videos

Install App

ಪರಂಗಿ ಹಣ್ಣಿನಿಂದ ಇಷ್ಟೆಲ್ಲಾ ಉಪಯೋಗಗಳಿವೆಯೇ?

Webdunia
ಬುಧವಾರ, 10 ಅಕ್ಟೋಬರ್ 2018 (16:43 IST)
ಸಾರ್ವಕಾಲಿಕವಾಗಿ ಸಿಗುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡಾ ಒಂದು. ಈ ಹಣ್ಣನ್ನು ಹುಡುಕಿಕೊಂಡು ಎಲ್ಲೋ ದೂರಕ್ಕೆ ಹೋಗಬೇಕೆಂದೇನಿಲ್ಲ ಏಕೆಂದರೆ ಮನೆಯ ಅಂಗಳದಲ್ಲಿಯೇ ಬೆಳೆಯಬಹುದಾದ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣಿನಲ್ಲಿ ನಾರಿನಂಶ, ಕೆರೊಟಿನ್, ವಿಟಾಮಿನ್ ಸಿ, ಖನಿಜ ಲವಣಗಳು, ಪೊಟ್ಯಾಷಿಯಂ ಗುಣಗಳು ಹೇರಳವಾಗಿವೆ. ಇದು 'ದೇವತೆಗಳ ಹಣ್ಣು' ಎಂದಾಗಿದೆ. ಅಷ್ಟೇ ಅಲ್ಲದೇ ಪರಂಗಿ ಹಣ್ಣಿಗೆ ಪಪ್ಪಾಯಿ ಅಂತಲೂ ಕರೆಯುತ್ತಾರೆ. 
* ನಿತ್ಯ ಪರಂಗಿ ಹಣ್ಣನ್ನು ಊಟದ ನಂತರ ತಿನ್ನುವುದರಿಂದ ಹೊಟ್ಟೆಯ ಉಬ್ಬರ ಕಡಿಮೆ ಅಗುವುದರೊಂದಿಗೆ ಸೇವಿಸಿದ ಆಹಾರದ ಪಚನದ ಕ್ರಿಯೆಗೆ ಸಹಕಾರಿಯಾಗಿದೆ.
 
* ವಿಟಾಮಿನ್ ಸಿ ಅಧಿಕವಾಗಿರುವ ಈ ಹಣ್ಣಿನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು , ಕಣ್ಣು ದೃಷ್ಟಿಯನ್ನು ರಕ್ಷಣೆ ಮಾಡುವುದರಲ್ಲಿ ಸಹಾಯಕವಾಗಿದೆ.
 
* ಅರೆಪಕ್ವ ಪರಂಗಿ ಹಣ್ಣನ್ನು ತುರಿದು ಗಾಯ ಆದ ಜಾಗಕ್ಕೆ ಹಚ್ಚುವುದರಿಂದ ಗಾಯವು ವಾಸಿಯಾಗುತ್ತದೆ.
 
* ಪರಂಗಿ ಹಣ್ಣು ಅಥವಾ ಪರಂಗಿ ಹಣ್ಣಿನ ರಸವನ್ನು ಸೇವಿಸುವುದರಿಂದ ಗಟ್ಟಿಯಾಗಿದ್ದ ಆಹಾರಗಳು ಮೆದುವಾಗಿ ಸುಲಭವಾಗಿ ವಿಸರ್ಜಿಸಲು ಸಹಕಾರಿಯಾಗುವುದಲ್ಲದೇ ಮಲಬದ್ಧತೆಯನ್ನು ನಿವಾರಿಸುತ್ತದೆ.
 
* ಪರಂಗಿ ಹಣ್ಣಿನಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ವಿರೋಧಿ ಅಂಶಗಳಿಂದ ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
 
* ದೈನಂದಿನ ಆಹಾರದಲ್ಲಿ ಕ್ಯಾಲೋರಿ ಕಡಿಮೆಯಿರುವ ಈ ಹಣ್ಣನ್ನು ಸೇವಿಸುವುದರಿಂದ  ತೂಕ ಇಳಿಕೆಯಾಗುತ್ತದೆ.
 
* ಆಗಾಗ ಪಪ್ಪಾಯಿ ಸಿಪ್ಪೆಯನ್ನು ಮುಖದ ಮೇಲೆ ಮಸಾಜ್  ಮಾಡುವುದರಿಂದ ಮುಖದ ಮೇಲಿನ ಕಲೆಗಳು ನಿವಾರಣೆಯಾಗುತ್ತವೆ.
 
* ಪಪ್ಪಾಯಿ ಹಣ್ಣಿನ ರಸವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬಿಸಿನೀರಿಗೆ ಹಾಕಿ ಸೇವಿಸುವುದರಿಂದ ಜಂತು ಹುಳಗಳು ನಿವಾರಣೆಯಾಗುತ್ತವೆ.
 
* ಪ್ರತಿನಿತ್ಯ ಪರಂಗಿ ಹಣ್ಣನ್ನು ಸೇವಿಸುವುದರಿಂದ ಮೂತ್ರಕೋಶದಲ್ಲಿ ಕಲ್ಲುಂಟಾಗುವುದಿಲ್ಲ. 
 
* ಬಾಯಿಹುಣ್ಣಿಗೆ ಪರಂಗಿ ಹಣ್ಣಿನ ಹಾಲನ್ನು ಹಚ್ಚುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
* ಮುಟ್ಟಿನ ಸಂದರ್ಭದಲ್ಲಿ ಹೆಂಗಳೆಯರು ಇದನ್ನು ಸೇವಿಸುವುದರಿಂದ ಇದರಲ್ಲಿರುವ ಪಪೇನ್ ಅಂಶವು ನೋವನ್ನು ನಿವಾರಿಸಿ ಋತುಚಕ್ರವನ್ನು ನಿರಾಳಗೊಳಿಸುತ್ತದೆ.
 
* ಮುಟ್ಟು ಸರಿಯಾದ ಸಮಯಕ್ಕೆ ಆಗದೇ ಇರುವ ಮಹಿಳೆಯರು ಪಪ್ಪಾಯಿಯ ಬೀಜವನ್ನು ಪುಡಿಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಮುಟಟ್ು ಸರಿಯಾಗಿ ಆಗುತ್ತದೆ.
 
* ಪಪ್ಪಾಯಿಯನ್ನು ಸೇವಿಸುವುದರಿಂದ ಸಂಧಿವಾತದ ಸಮಸ್ಯೆಯು ನಿವಾರಣೆಯಾಗುತ್ತದೆ. 
 
* ಈ ಹಣ್ಣನ್ನು ಚಿಕ್ಕ ಮಕ್ಕಳಿಗೂ ಸೇವಿಸಲು ನೀಡುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಯಾಗುತ್ತದೆ.
 
* ಪರಂಗಿ ಹಣ್ಣಿನಲ್ಲಿ ಸಕ್ಕರೆ ಅಂಶವು ಕಡಿಮೆ ಇರುವುದರಿಂದ ಇದನ್ನು ಮಧಮೇಹಿಗಳೂ ಕೂಡಾ ಸೇವಿಸಬಹುದಾಗಿದೆ.
 
* ಪಪ್ಪಾಯಿಯಲ್ಲಿರುವ ವಿಟಾಮಿನ್ ಎ ಯು ಕಣ್ಣು ಮಂಜಾಗುವುದು, ಕಣ್ಣಿನ ಪೊರೆ ಬರುವುದನ್ನು ಕಡಿಮೆ ಮಾಡುತ್ತದೆ.
 
* ಬಾಣಂತಿಯರು ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಅವರಲ್ಲಿ ಹಾಲಿನ ಉತ್ಪತ್ತಿ ಜಾಸ್ತಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments