ಬೆಂಗಳೂರು : ಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಅನ್ನ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈ ಅಕ್ಕಿಯಿಂದಲೂ ಕೂಡ ಕೆಲವು ರೋಗಗಳನ್ನು ದೂರಮಾಡಬಹುದು . ಅದು ಯಾವ ರೋಗಗಳು ಎಂಬುದನ್ನು ತಿಳಿಯೋಣ.
ಫುಡ್ ಪಾಯಿಸನ್ ಸಮಸ್ಯೆ ಇಂದ ಅಥವಾ ಅಜೀರ್ಣ ಸಮಸ್ಯೆಗಳಿಂದ ಭೇದಿ ಉಂಟಾಗಿ ಸುಸ್ತಾಗಿದ್ದಾಗ ಅಕ್ಕಿ ತರಿಗಂಜಿ ಮಾಡಿ ಉಪ್ಪು ಬೆರಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ. ಮೊಸರು ಬೆರೆಸಿದ ಕೆಂಪಕ್ಕಿಯ ಅನ್ನವನ್ನು ನಿತ್ಯವೂ ಸೂರ್ಯೋದಯಕ್ಕೆ ಮೊದಲು ಸೇವಿಸಿದರೆ ಅರೆತಲೆ ನೋವು ಕಡಿಮೆಯಾಗುತ್ತದೆ.
ಚಿಕ್ಕ ಮಕ್ಕಳಿಗೆ ಅಥವಾ ದೊಡ್ಡವರಿಗೆ ಬೇಸಿಗೆಯಲ್ಲಿ ಬೆವರು ಗುಳ್ಳೆಗಳು ಉಂಟಾಗುತ್ತವೆ, ಅಂತಹ ಸಮಯದಲ್ಲಿ ಅಕ್ಕಿ ತೊಳೆದ ನೀರಿನಲ್ಲಿ ಕೈ ಕಾಲುಗಳನ್ನು ತೊಳೆದರೆ ಬೆವರು ಗುಳ್ಳೆ ಸಮಸ್ಯೆ ಶಮನವಾಗುತ್ತದೆ. ದೇಹದಲ್ಲಿ ಪೋಷ್ಟಿಕಾಂಶದ ಕೊರೆತೆ ಇದ್ದವರು ಕೆಂಪು ಅಕ್ಕಿಯಲ್ಲಿ ಅನ್ನ ಮಾಡಿ ತಿನ್ನಬೇಕು.
ಅಕ್ಕಿಯನ್ನು 2ನೇ ಬಾರಿ ತೊಳೆದ ನೀರಿಗೆ ನೆಲ್ಲಿಕಾಯಿರಸ ಎರಡು ಚಮಚ ಬೆರಸಿ ಕುಡಿದರೆ ಸ್ತ್ರೀಯರಲ್ಲಿ ಬಿಳುಪು ಹೋಗುವುದು ಅಥವಾ ಬಿಳಿ ಸೆರಗು ಕಡಿಮೆಯಾಗುತ್ತದೆ. ಅಕ್ಕಿಯ ಹೊಟ್ಟು ಪೌಷ್ಟಿಕಾಂಶಗಳಿಂದ ಕೂಡಿದೆ. ಅಕ್ಕಿಯ ಹೊಟ್ಟನ್ನು ಎಳ್ಳು, ನೆಲಗಡಲೆ, ಗೋಡಂಬಿಯನ್ನು ಬೆರೆಸಿ ಬೆಲ್ಲದ ಪಾಕಕ್ಕೆ ಸೇರಿಸಿ ಲಾಡುವಿನಂತೆ ಮಾಡಿ ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.