Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿದಿನ ಮಾಡುವ ‘ರನ್ನಿಂಗ್ ಮತ್ತು ಜಂಪಿಂಗ್‘ ಪ್ರಯೋಜನ

ಪ್ರತಿದಿನ ಮಾಡುವ ‘ರನ್ನಿಂಗ್ ಮತ್ತು ಜಂಪಿಂಗ್‘ ಪ್ರಯೋಜನ
ಬೆಂಗಳೂರು , ಶನಿವಾರ, 23 ಅಕ್ಟೋಬರ್ 2021 (13:24 IST)
ನಿಮ್ಮ ದೇಹವನ್ನು ಫಿಟ್ ಆಗಿರಿಸಲು ನೀವು ಯಾವಾಗಲೂ ಯೋಚಿಸುತ್ತೀರಿ. ದೇಹವು ಫಿಟ್ ಆಗಿದ್ದರೆ ರೋಗಗಳ ಅಪಾಯ ಕೂಡಾ ಕಡಿಮೆ ಜತೆಗೆ ಆರೋಗ್ಯವೂ ಸುಧಾರಿಸುತ್ತದೆ.
ಹೀರುವಾಗ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ವಾಕಿಂಗ್, ರನ್ನಿಂಗ್ ಮತ್ತು ಜಂಪಿಂಗ್ ಸಹಾಯಕ. ಇದರ ಜೊತೆ ಜೊತೆಯಲ್ಲಿ ನಿಯಮಿತವಾದ ಇನ್ನಿತರ ವ್ಯಾಯಾಮ ಕೂಡಾ ಮುಖ್ಯ. ಹೀಗಿರುವಾಗ ಪ್ರತಿನಿತ್ಯ ರನ್ನಿಂಗ್ ಮತ್ತು ಜಂಪಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.
ಸ್ನಾಯುಗಳನ್ನು ಬಲಪಡಿಸುತ್ತದೆ
webdunia

ಜಂಪಿಂಗ್ ಮತ್ತು ರನ್ನಿಂಗ್ ಎರಡೂ ಕೂಡಾ ದೇಹದ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಇದು ನಿಮ್ಮ ಬೆನ್ನು ಹುರಿ, ಸೊಂಟ, ಕೈಕಾಲುಗಳಿಗೆ ಸಂಬಂಧಿಸಿದೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯಕವಾಗಿದೆ. ಜತೆಗೆ ನಿಮ್ಮ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಳ್ಳಲು ಸಹಾಯಕವಾಗಿದೆ.
ಕ್ಯಾಲೊರಿಗಳನ್ನು ಕರಗಿಸುತ್ತದೆ
ಜಂಪಿಂಗ್ ಮತ್ತು ರನ್ನಿಂಗ್​ನಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬ ಕರಗುತ್ತದೆ. ಜತೆಗೆ ದೇಹದ ಫಿಟ್ನೆಸ್ ಕಾಯ್ದುಕೊಳ್ಳಬಹುದು. ನೀವು ಹೆಚ್ಚಿನ ತೂಕ ಹೊಂದಿದ್ದರೆ, ಪ್ರತಿನಿತ್ಯ ಜಂಪಿಂಗ್ ಮತ್ತು ರನ್ನಿಂಗ್ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ.
ಪ್ರಯೋಜನಗಳು
ಜಂಪಿಂಗ್​ನಿಂದ ದೇಹದ ಕೊಬ್ಬು ಕರಗಿಸುವುದರ ಜತೆಗೆ ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ಪಾದಗಳ ಉರಿಯೂತ, ಸೊಂಟ ನೋವುಗಳಂತಹ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು. ಜಂಪಿಂಗ್ ಬದಲಿಗೆ ನೀವು ಸ್ಕಿಪ್ಪಿಂಗ್ ಕೂಡಾ ಮಾಡಬಹುದು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನವನ್ನು ನೀಡುತ್ತದೆ. ಪ್ರತಿನಿತ್ಯ 2 ರಿಂದ 3 ನಿಮಿಷದವರೆಗೆ ಸ್ಕಿಪ್ಪಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ?