Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒತ್ತಡದ ಸಮಸ್ಯೆಗೆ ಬೈ ಹೇಳಿ..!!

ಒತ್ತಡದ ಸಮಸ್ಯೆಗೆ ಬೈ ಹೇಳಿ..!!
ಬೆಂಗಳೂರು , ಗುರುವಾರ, 7 ಜೂನ್ 2018 (14:49 IST)
ಈಗೀಗ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಒತ್ತಡದ ಸಮಸ್ಯೆಯೂ ಒಂದು. ಹೆಚ್ಚಿನ ಜನರಿಗೆ ತಮಗೆ ಇರುವ ಸಮಸ್ಯೆಯ ಬಗ್ಗೆ ತಿಳಿದಿರುವುದೇ ಇಲ್ಲ. ಜನರು ಒತ್ತಡವನ್ನು ನಿರ್ವಹಿಸಲು ಮತ್ತು ಸಂತೋಷದ, ಆರೋಗ್ಯಕರ ಜೀವನವನ್ನು ನಡೆಸಲು ಕಲಿಯಬಹುದು.
* ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿ. ಯಾವಾಗಲೂ ಒಳ್ಳೆಯದನ್ನೇ ಆಲೋಚಿಸುತ್ತಿದ್ದರೆ ಅದು ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.
 
* ನೀವು ನಿಯಂತ್ರಿಸಲಾಗದ ಘಟನೆಗಳು ಇರುತ್ತವೆ ಎಂಬುದನ್ನು ಒಪ್ಪಿಕೊಳ್ಳಿ. ಯಾವುದೇ ಘಟನೆಯು ನಮ್ಮ ಕೈಮೀರಿ ನಡೆಯಬಹುದು. ಅದರ ಕುರಿತು ಯೋಚಿಸಿ ಮನಸ್ಸಿನ ಸ್ಥಿಮಿತವನ್ನು ಕೆಡಿಸಿಕೊಳ್ಳಬಾರದು.
 
* ಆರೋಗ್ಯಕರ ಹಾಗೂ ಸಮತೋಲನದ ಆಹಾರವನ್ನು ಸೇವಿಸಿ. ನಾವು ಸೇವಿಸುವ ಆಹಾರವೂ ಸಹ ನಮ್ಮ ಸ್ವಾಸ್ತ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಮರೆಯಬಾರದು.
 
* ಪ್ರತಿ ದಿನವೂ ವ್ಯಾಯಾಮ ಮಾಡಿ. ನಿಮ್ಮ ದೇಹವು ಫಿಟ್ ಆಗಿರುವಾಗ ಒತ್ತಡದ ವಿರುದ್ಧ ಹೋರಾಡಬಹುದು.
 
* ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ ಮತ್ತು ತಿಳಿದುಕೊಳ್ಳಿ. ಧ್ಯಾನ, ಯೋಗ ಅಥವಾ ತೈ-ಚಿ ಅನ್ನು ಪ್ರಯತ್ನಿಸಿ. ಇವುಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
 
* ನಿಮ್ಮ ಆಕ್ರಮಣಕಾರಿ ಮನೋಭಾವನೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಕೋಪ, ರಕ್ಷಣಾತ್ಮಕ ಅಥವಾ ನಿಷ್ಕ್ರಿಯತೆಯ ಬದಲಾಗಿ ನಿಮ್ಮ ಭಾವನೆಗಳು, ಅಭಿಪ್ರಾಯಗಳು ಅಥವಾ ನಂಬಿಕೆಗಳನ್ನು ದೃಢೀಕರಿಸಿಕೊಳ್ಳಿ.
 
* ನಿಮ್ಮ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ತಿಳಿದುಕೊಳ್ಳಿ.
 
* ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳಿಗೆ ಸಮಯವನ್ನು ಮೀಸಲಿಡಿ. ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಯ ವಿಷಯಗಳಲ್ಲಿ ನೀವು ತೊಡಗಿಕೊಳ್ಳುವುದರಿಂದ ಅದು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆಯಾಗಿಸಿ ಮನಸ್ಸನ್ನು ನಿರಾಳವಾಗಿಸುತ್ತದೆ.
 
* ನಿಮ್ಮ ಜೀವನದಲ್ಲಿ ಅತಿಯಾದ ಒತ್ತಡವನ್ನು ಸೃಷ್ಟಿಸುವ ವಿನಂತಿಗಳು ಅಥವಾ ಕೆಲಸಗಳಿಗೆ ಇಲ್ಲ ಎಂದು ಹೇಳಿಬಿಡಿ.
 
* ಸಾಕಷ್ಟು ನಿದ್ದೆ ಮತ್ತು ವಿಶ್ರಾಂತಿಯನ್ನು ಪಡೆದುಕೊಳ್ಳಿ. ಒತ್ತಡಕ್ಕೊಳಗಾಗುವ ಘಟನೆಗಳಿಂದ ಚೇತರಿಸಿಕೊಳ್ಳಲು ನಿಮ್ಮ ದೇಹಕ್ಕೆ ಸಮಯದ ಅಗತ್ಯವಿರುತ್ತದೆ.
 
* ಸಾಮಾಜಿಕ ಬೆಂಬಲವನ್ನು ಹುಡುಕಿಕೊಳ್ಳಿ. ನೀವು ಪ್ರೀತಿಸುವವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಿರಿ.
 
* ಒತ್ತಡವನ್ನು ತಗ್ಗಿಸಲು ಆಲ್ಕೋಹಾಲ್, ಡ್ರಗ್ಸ್ ಅಥವಾ ಕಂಪಲ್ಸಿವ್(ನಿರ್ಬಂಧಪಡಿಸುವ) ನಡವಳಿಕೆಗಳನ್ನು ಅವಲಂಬಿಸಬೇಡಿ. ಡ್ರಗ್ಸ್ ಮತ್ತು ಆಲ್ಕೋಹಾಲ್ ನಿಮ್ಮ ದೇಹವನ್ನು ಇನ್ನೂ ಹೆಚ್ಚು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು.
 
* ನಿಮ್ಮ ಜೀವನದಲ್ಲಿ ಒತ್ತಡವನ್ನು ನಿಭಾಯಿಸಲು ಹೆಚ್ಚು ಆರೋಗ್ಯಕರ ವಿಧಾನಗಳನ್ನು ಕಲಿಯಲು ಒತ್ತಡ ನಿರ್ವಹಣೆ ಅಥವಾ ಬಯೋಫೀಡ್‌ಬ್ಯಾಕ್ ತಂತ್ರಗಳಲ್ಲಿ ತರಬೇತಿ ಪಡೆದ ಮನಶಾಸ್ತ್ರಜ್ಞ ಅಥವಾ ಇತರ ಮಾನಸಿಕ ಆರೋಗ್ಯ ವೃತ್ತಿಪರರಲ್ಲಿ ಚಿಕಿತ್ಸೆಯನ್ನು ಪಡೆಯಿರಿ.
 
ಈ ಮೇಲಿನ ಸಲಹೆಗಳನ್ನು ಪಾಲಿಸಿ ಒತ್ತಡದ ಸಮಸ್ಯೆಯನ್ನು ದೂರವಾಗಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಕರೆ ಕಾಯಿಲೆಯ ಸಮಸ್ಯೆಗಳನ್ನು ತಪ್ಪಿಸುವ ಮಾರ್ಗಗಳು...