Webdunia - Bharat's app for daily news and videos

Install App

ಪ್ರತಿನಿತ್ಯ ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ!

Webdunia
ಮಂಗಳವಾರ, 5 ಅಕ್ಟೋಬರ್ 2021 (07:17 IST)
ಹೊಟ್ಟೆಯ ಕೊಬ್ಬ ನಿವಾರಣೆ ಜತೆಗೆ ಆರೋಗ್ಯ ಸುಧಾರಣೆ ಮಾಡುವಾಗ ಪ್ರತಿನಿತ್ಯ ಮಾಡುವ ಈ ಕೆಲವು ತಪ್ಪುಗಳನ್ನು ಬೇಗ ಸರಿಪಡಿಸಿಕೊಳ್ಳಿ ಹಾಗೂ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ಆರೋಗ್ಯದ ಸುಧಾರಣೆಗೆ ಜನರು ಏನೆಲ್ಲಾ ಮಾಡುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಪೌಷ್ಟಿಕಾಂಶಯುಕ್ತ ಆಹಾರ, ಪ್ರೋಟೀನ್ಯುಕ್ತ ಆಹಾರ ಎಲ್ಲವನ್ನೂ ನಿಯಮಿತವಾಗಿ ಸೇವಿಸುತ್ತಿದ್ದರೂ ಸಹ ಆರೋಗ್ಯ ತೊಂದರೆಗಳು ಉಂಟಾಗುತ್ತಿವೆ ಎಂಬುದು ಕೆಲವರ ಅಭಿಪ್ರಾಯ. ಹಾಗಿರುವಾಗ ನೀವು ದಿನಚರಿಯಲ್ಲಿ ಮಾಡುವ ಕೆಲವು ತಪ್ಪುಗಳು ಆರೋಗ್ಯ ತೊಂದರೆಗೆ ಕಾರಣವಾಗುತ್ತವೆ. ಹೀಗಿರುವಾಗ ನೀವು ಪ್ರತಿನಿತ್ಯ ಮಾಡುತ್ತಿರುವ ಈ ಕೆಲವು ತಪ್ಪುಗಳನ್ನು ಬೇಗ ಸರಿಪಡಿಸಿಕೊಳ್ಳಿ.
ಸಾಮಾನ್ಯವಾಗಿ ಹೊಟ್ಟೆಯ ಕೊಬ್ಬು ಸಮಸ್ಯೆ ನಿವಾರಿಸಿಕೊಳ್ಳಲು ಅದೆಷ್ಟೋ ಪ್ರಯತ್ನ ಪಟ್ಟಿರಬಹುದು. ಜತೆಗೆ ಈ ಕೆಲವು ಅಭ್ಯಾಸಗಳಿಂದಲೂ ಸಹ ಹೊಟ್ಟೆಯ ಕೊಬ್ಬು ಹೆಚ್ಚಾಗಬಹುದು. ಹಾಗಿರುವಾಗ ಹೊಟ್ಟೆಯ ಕೊಬ್ಬ ನಿವಾರಣೆ ಜತೆಗೆ ಆರೋಗ್ಯ ಸುಧಾರಣೆ ಮಾಡುವಾಗ ಈ ಕೆಲವು ವಿಷಯಗಳನ್ನು ನೀವು ನೆನಪಿನಲ್ಲಿಡಿ.
ನಿಂತು ನೀರು ಕುಡಿಯುವುದು
ಒತ್ತಡದ ದಿನಚರಿಯಲ್ಲಿ ನೀರನ್ನು ಸಹ ಗಡಿಬಿಡಿಯಲ್ಲಿ ಕುಡಿಯುವ ಅಭ್ಯಾಸ ರೂಢಿಯಾಗಿಬಿಟ್ಟಿದೆ. ಊಟ ಮಾಡುವಾಗಲೂ ಸಹ ನಿಂತಿರುವಾಗಲೇ ಗಬಗಬನೆ ತಿಂದು ಕೈ ತೊಳೆಯುವವರಿದ್ದಾರೆ. ಆದರೆ ಶಾಂತವಾಗಿ ನಿಧಾನವಾಗಿ ಊಟ ಮಾಡಬೇಕು, ಮುಖ್ಯವಾಗಿ ಕುಳಿತುಕೊಂಡು ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆಯುರ್ವೇದದ ಪ್ರಕಾರ ಕುಳಿತುಕೊಂಡು ಬೆನ್ನು ಹುರಿಯನ್ನು ನೇರವಾಗಿರಿಸಿಕೊಂಡು ನೀರು ಕುಡಿಯುವ ಅಭ್ಯಾಸದಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿದು ಬಂದಿದೆ.
ಹೆಚ್ಚು ಸೋಡಾ ಕುಡಿಯುವುದು
ಅಧಿಕ ಪ್ರಮಾಣದಲ್ಲಿ ಸೋಡಾ ಸೇವಿಸುವುದರಿಂದ ಆರೋಗ್ಯ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಒಂದು ರೀತಿಯಲ್ಲಿ ಸೋಡಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂಬುದಿದ್ದರೂ ಸಹ ಇನ್ನೊಂದು ದೃಷ್ಟಿಯಿಂದ ಅತಿಯಾಗಿ ಸೋಡಾ ಸೇವನೆಯು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಅಧ್ಯಯನ ಪ್ರಕಾರ, ಒಂದು ಗ್ಲಾಸ್ ನೀರಿನೊಂದಿಗೆ ಸಕ್ಕರೆ ಸೋಡಾ ಶೇ. 70ರಷ್ಟು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸಬಹುದು ಎಂಬುದು ತಿಳಿದು ಬಂದಿದೆ.
ಅನಿಯಮಿತ ಆಹಾರ ಸೇವನೆ
ನೀವು ಯಾವ ತಟ್ಟೆಯನ್ನು ಆಯ್ದುಕೊಳ್ಳುತ್ತೀರಿ ಎಂಬುದು ನಿಮ್ಮ ಊಟದ ಪ್ರಮಾಣವನ್ನು ನಿರ್ಧರಿಸುತ್ತದೆ. ಜತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅತಿಯಾದ ಹಸಿವನ್ನು ತಡೆದುಕೊಳ್ಳುವುದೂ ಸಹ ಆರೋಗ್ಯವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಬೆಳಿಗ್ಗೆ 8:30 ರ ಒಳಗೆ ಉಪಹಾರ ಸೇವಿಸುವುದು ಮಧುಮೇಹದಂತಹ ಸಮಸ್ಯೆ ಮತ್ತು ಚಯಾಪಚಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮುಖದಲ್ಲಿರುವ ಕಪ್ಪು ಕಲೆ ನಿವಾರಿಸಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ

ತಲೆನೋವು ಪರಿಹಾರಕ್ಕೆ ಈ ಯೋಗ ಸೂಕ್ತ

ಈ ಖಾಯಿಲೆ ಇರುವವರು ರಾತ್ರಿ ಮೊಸರು ತಿನ್ನಬಾರದು

ಬೇಯಿಸಿದ ಆಹಾರವನ್ನು ಫ್ರಿಡ್ಜ್ ನೊಳಗೆ ಎಷ್ಟು ಹೊತ್ತು ಇಟ್ಟು ಸೇವಿಸಬಹುದು

ರಾತ್ರಿ ಮಲಗುವ ಮುನ್ನ ತ್ವಚೆಯ ರಕ್ಷಣೆಗಾಗಿ ಈ ಕೆಲಸ ಮಾಡಿ

ಮುಂದಿನ ಸುದ್ದಿ
Show comments