ಬೆಂಗಳೂರು: ಕಳ್ಳೆಪುರಿ, ನೆಲಕಡಲೆ ಮುಂತಾದ ಆಹಾರ ವಸ್ತುಗಳನ್ನು ಸೇವಿಸಿದ ಕೂಡಲೇ ನೀರು ಕುಡಿಯಬಾರದು ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಆದರೆ ಇದು ಎಷ್ಟು ನಿಜ? ಆಹಾರ ತಜ್ಞರು ಏನಂತಾರೆ ಗೊತ್ತಾ?
ನೆಲಕಡಲೆ ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ನೆಲಕಡಲೆಯಲ್ಲಿ ಎಣ್ಣೆಯ ಅಂಶವಿರುವ ಕಾರಣ ಅದನ್ನು ಸೇವಿಸಿದ ತಕ್ಷಣ ನೀರು ಕುಡಿದರೆ ಕರುಳಿನಲ್ಲಿ ಜಿಡ್ಡು ಶೇಖರಣೆಯಾಗಿ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು ಎಂಬುದು ತಪ್ಪು ವಾದ.
ನೆಲಕಡಲೆ ಎಂಬುದು ತೇವಾಂಶಭರಿತ ಕೊಬ್ಬು ಹೊಂದಿದ್ದು, ಇದನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಯಾವುದೇ ಸಮಸ್ಯೆಯಾಗದು ಎಂದು ಆಹಾರ ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ