ಬೆಂಗಳೂರು : ದೂರ ಪ್ರಯಾಣ ಮಾಡುವಾಗ ವಾಂತಿ ಅಥವಾ ತಲೆ ಸುತ್ತುವ ಸಮಸ್ಸೆಗಳು ಕೆಲವರನ್ನು ಕಾಡುತ್ತದೆ. ಆದ್ದರಿಂದದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಈ ಕೆಲವೊಂದು ಮನೆ ಮದ್ದುಗಳನ್ನು ತೆಗೆದುಕೊಳ್ಳುವುದರಿಂದ ತಲೆಸುತ್ತುವಿಕೆ ಮತ್ತು ವಾಂತಿಯನ್ನು ತಡೆಯಬಹುದು.
ಒಂದು ಕಪ್ ನಿಂಬೆ ಜ್ಯೂಸ್ಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿದ ಬಳಿಕ ಪ್ರಯಾಣ ಆರಂಭಿಸಬೇಕು.
ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ ಸೇವಿಸಬೇಕು. ಇದರ ಜೊತೆಗೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ವಾಹನ ಪ್ರಯಾಣ ಆರಂಭಿಸಿದ ತಕ್ಷ ಣ ಒಂದೆರಡು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಇದ್ದರೆ ವಾಂತಿ ಬರುವುದಿಲ್ಲ.
ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣ ಮಾಡುವುದಾದರೆ ಊಟ ಮುಗಿದಾದ ಮೇಲೆ ಒಂದು ಲೋಟ ಹಸಿಶುಂಠಿಯ ಟೀ ಕುಡಿದು ನಂತರ ಹೊರಡಬೇಕು. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ.
ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ನಿಂಬೆ ಹಣ್ಣಿನ ವಾಸನೆಯನ್ನು ಸೇವಿಸುತ್ತಾ ಹೋದಲ್ಲಿ ವಾಂತಿ ಆಗುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ