ಬೆಂಗಳೂರು: ಕ್ಯಾಬೇಜ್, ಹೂ ಕೋಸಿನಂತಹ ತರಕಾರಿಗಳಲ್ಲಿ ಸಣ್ಣ ಪುಟ್ಟ ಹುಳ ಹುಪ್ಪಟೆಗಳು ಇದ್ದೇ ಇರುತ್ತವೆ. ಇದನ್ನು ಕ್ಲೀನ್ ಮಾಡಲು ಇಲ್ಲಿದೆ ಉಪಾಯ.
ಇಂತಹ ತರಕಾರಿಗಳಲ್ಲಿ ವಿಷದ ಪ್ರಮಾಣವೂ ಹೆಚ್ಚಿರುತ್ತದೆ. ಹಾಗಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ತೊಳೆದುಕೊಂಡು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಕ್ಯಾಬೇಜ್ ನನ್ನು ಕತ್ತರಿಸುವ ಮೊದಲು ಎರಡು ಪದರ ತೆಗೆದೇ ಉಪಯೋಗಿಸಿ. ಬಳಿಕ ಇದನ್ನು ತೊಳೆದುಕೊಂಡು ಚಿಕ್ಕದಾಗಿ ಕತ್ತರಿಸಿ ವಿನೇಗರ್ ದ್ರಾವಣದಲ್ಲಿ ಕೆಲವು ನಿಮಿಷ ಅದ್ದಿಡಿ. ಒಂದು ವಿನೇಗರ್ ಇಲ್ಲವಾದರೆ ಉಪ್ಪು ನೀರಿನಲ್ಲಾದರೂ ಕೆಲವು ನಿಮಿಷ ಅದ್ದಿಡುವುದು ಒಳ್ಳೆಯದು. ಕಾಲಿಫ್ಲವರ್ ಅಥವಾ ಹೂಕೋಸು ಬಳಸುವಾಗ ಅದನ್ನು ಚೆನ್ನಾಗಿ ಬಿಡಿಸಿಕೊಂಡು ಇದೇ ರೀತಿಯ ದ್ರಾವಣದಲ್ಲಿ ಅದ್ದಿಡಿ. ಬಳಿಕವೇ ಇದನ್ನು ಅಡುಗೆಗೆ ಬಳಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.