ಕೆಲವು ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದು ನೆನಪಿನಲ್ಲಿರಲಿ.
ಗೋಡಂಬಿಯಲ್ಲಿ ಪ್ರೊಟೀನ್, ಜೀವಸತ್ವಗಳು, ಖನಿಜಗಳು, ಪೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಮಿತವಾದ ಸೇವನೆಯ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಗೋಡಂಬಿ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.
ಯಾರು ಗೋಡಂಬಿಯಅನ್ನು ಸೇವಿಸಬಾರದು? ಗೋಡಂಬಿ ಸೇವನೆಯಿಂದ ಆರೋಗ್ಯ ಪ್ರಯೋಜನಗಳೆಷ್ಟಿವೆ? ಈ ಕುರಿತಾದ ಮಾಹಿತಿ ಈ ಕೆಳಗಿನಂತಿದೆ. ಮುಂಬೈನ ಅಪೊಲೊ ಆಸ್ಪತ್ರೆಯ ಡಯೆಟೀಷಿಯನ್ ಡಾ. ಜಿನಾಲ್ ಪಟೇಲ್ ಅವರು ಹೇಳಿರುವ ಮಾಹಿತಿಯನ್ನು ಇಂಡಿಯನ್ ಡಾಟ್ ಕಾಮ್ನಲ್ಲಿ ಉಲ್ಲೇಖಿಸಲಾಗಿದೆ.
ಅಲರ್ಜಿ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರೂ ಸಹ ಗೋಡಂಬಿ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.
ನೀವು ಗೋಡಂಬಿಯನ್ನು ಅತಿಯಾಗಿ ಸೇವಿಸಿದಾಗ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಅಜೀರ್ಣ ಸಮಸ್ಯೆ ಹೊಂದಿರುವವರಿಗೆ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ
ಗೋಡಂಬಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ತೂಕ ಇಳಿಕೆ
ಬೀಜಗಳಲ್ಲಿ ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳನ್ನು ಹೊಂದಿರುತ್ತದೆ. ಹಸಿವಿನ ನೋವನ್ನು ನಿವಾರಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಇದು ಉತ್ತಮ ಆಯ್ಕೆ ಎಂದು ತಜ್ಞರು ಹೇಳಿದ್ದಾರೆ.
ಹೃದಯ
ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾರಕ್ಕೆ ನಾಲ್ಕು ಬಾರಿ ಗೋಡಂಬಿ ಸೇವಿಸುವುದರಿಂದ ಶೇ 37ರಷ್ಟು ಹೃದ್ರೋಗ ಅಪಾಯವು ಕಡಿಮೆಯಾಗುತ್ತದೆ.
ಜೀವಕೋಶದ ಹಾನಿ
ಬೀಜಗಳು ಉತ್ಕರ್ಷಕ ನಿರೋಧಕಗಳನ್ನು ಹೊಂದಿರುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಯಮಿತವಾದ ಗೋಡಂಬಿ ಸೇವನೆಯು ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯಕವಾಗಿದೆ.
ಸಕ್ಕರೆ ಮಟ್ಟನ್ನು ನಿಯಂತ್ರಿಸುತ್ತದೆ
ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ನಿಮ್ಮ ದೈಹಿಕ ಸ್ಥಿತಿ ಜೊತೆಗೆ ಮಾನಸಿಕ ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ.