ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು PCOS, PCOD ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಬಂಜೆತನ ಕಾಡಬಹುದು. ಆದಕಾರಣ ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಈ ಹಣ್ಣುಗಳನ್ನು ಸೇವಿಸಿ.
ದಾಳಿಂಬೆ ಹಣ್ಣು ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪಿನ್ ಅಂಶ PCOD ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಸೇಬು ಹಣ್ಣಿನಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಪೊಲಿಕ್ ಆಸಿಡ್, ಫೈಬರ್ ಇರುತ್ತದೆ. ಇದು PCOD ಸಮಸ್ಯೆಯಿಂದ ನಿಮ್ಮನ್ನ ಕಾಪಾಡುತ್ತದೆ.
ಪಪ್ಪಾಯ ಹಣ್ಣು ನಿಮ್ಮ ಪಿರಿಯಡ್ ಸಮಸ್ಯೆಯನ್ನು ದೂರಮಾಡುತ್ತದೆ. ಹಾಗೇ ನೇರಳೆ ಹಣ್ಣು, ಟೊಮೆಟೊ, ಕಿತ್ತಳೆ ಹಣ್ಣನ್ನು ಸೇವಿಸುವುದರಿಂದಲೂ PCOD ಸಮಸ್ಯೆ ದೂರವಾಗುತ್ತದೆ.