ಬೆಂಗಳೂರು: ಸಾಮಾನ್ಯವಾಗಿ ಮಕ್ಕಳು ಬಿಸ್ಕೆಟ್ ಬೇಕು ಎಂದು ಬೇಡಿಕೆ ಇಡುವುದು ಸಾಮಾನ್ಯ. ನಾವೂ ಅಷ್ಟೇ. ಬಗೆ ಬಗೆಯ ಬಿಸ್ಕತ್ತುಗಳನ್ನು ಕೊಡಿಸಲು ಹಿಂದು ಮುಂದು ನೋಡುವುದಿಲ್ಲ. ಆದರೆ ಇಂತಹ ಆಹಾರಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ಬಿಸ್ಕೆಟ್, ಕೆಲವು ಶಿಶು ಆಹಾರ, ಕೆಲವು ಕುರುಕಲು ತಿಂಡಿಗಳು ಕ್ಯಾನ್ಸರ್ ರೋಗ ತರುವ ವಿಷಕಾರಿ ಅಂಶಗಳನ್ನು ಹೊಂದಿವೆ ಎಂದು ಆಹಾರ ಗುಣಮಟ್ಟ ಸಂಸ್ಥೆ (ಎಫ್ಎಸ್ಎ) ಹೇಳಿದೆ. ಸಂಸ್ಥೆಯ ಪ್ರಕಾರ 25 ಆಹಾರ ಉತ್ಪನ್ನಸಂಸ್ಥೆಗಳಲ್ಲಿ ಸೂಚಿತ ಮಟ್ಟಕ್ಕಿಂತ ಅಧಿಕ ವಿಷಕಾರಿ ಅಂಶಗಳು ಪತ್ತೆಯಾಗಿದೆ ಎಂದು ಅದು ಹೇಳಿಕೊಂಡಿದೆ.
ಈ ವಿಷಕಾರಿ ಅಂಶಗಳು ಡಿಎನ್ಎ ಸಂಯೋಜನೆಯಲ್ಲಿ ಪರಿವರ್ತನೆ ಮತ್ತು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಇಂತಹ ಆಹಾರಗಳನ್ನು ರೆಗ್ಯುಲರ್ ಆಗಿ ಬಳಸಬೇಡಿ. ಅಪರೂಪಕ್ಕೊಮ್ಮೆ ತಿನ್ನುವುದರಿಂದ ದೊಡ್ಡ ಅಪಾಯವಿಲ್ಲ ಎಂದು ಎಫ್ಎಸ್ಎ ಹೇಳಿದೆ. ಹಾಗಾಗಿ ಇಂತಹ ಯಾವುದೇ ಆಹಾರ ವಸ್ತುಗಳನ್ನು ಮಕ್ಕಳಿಗೆ ನಿಯಮಿತವಾಗಿ ನೀಡುವ ಮೊದಲು ಯೋಚಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ