ಬೆಂಗಳೂರು: ಆನ್ ಲೈನ್ ಡೇಟಿಂಗ್ ಆಪ್ ಗಳು ಈಗ ಯುವಕರಿಗೆ ಸುಂದರ ಹುಡುಗಿಯರನ್ನು ಪಟಾಯಿಸಲು ಒಳ್ಳೆಯ ವೇದಿಕೆ ನೀಡಿದೆ. ಆದರೆ ಈ ಆಪ್ ಗಳಲ್ಲಿ ಪರಿಚಿತವಾದ ಹುಡುಗಿಯ ಗುಣ ಸ್ವಭಾವ ಹೇಗಿರುತ್ತದೋ ಎನ್ನುವ ಆತಂಕ ಇದ್ದೇ ಇರುತ್ತದೆ.
ಆನ್ ಲೈನ್ ನಲ್ಲಿ ಪರಿಚಯವಾದ ಹುಡುಗಿ ಕೊನೆಗೆ ಲೈಂಗಿಕ ಕಿರುಕುಳ ಕೇಸ್ ಹಾಕುವುದು, ಹಣಕ್ಕಾಗಿ ಪೀಡಿಸುವುದು ಇತ್ಯಾದಿ ಕಿರುಕುಳ ನೀಡಿದ ಹಲವು ಉದಾಹರಣೆಗಳಿವೆ. ಮೊದಲು ಸುಂದರವಾಗಿ ಮಾತನಾಡಿ ಹುಡುಗರನ್ನು ಬುಟ್ಟಿಗೆ ಹಾಕಿಕೊಳ್ಳುವುದು. ನಂತರ ಆ ಹುಡುಗಿ ಇಲ್ಲದೇ ತನಗೆ ಬದುಕೇ ಇಲ್ಲ ಎಂದು ಯುವಕರು ಪರಿತಪಿಸುವಾಗ ಹಣ ನಿಡಿದರೆ ಮಾತ್ರ ಚಾಟ್ ಮಾಡುವುದಾಗಿ ಅಥವಾ ಭೇಟಿ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುವ ಉದಾಹರಣೆಗಳಿವೆ.
ಇಂತಹ ಸಂದರ್ಭದಲ್ಲಿ ಈ ಸಂಬಂಧದ ಅಗತ್ಯ ನಿಮಗಿದೆಯೇ ಎಂದು ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಆ ಹುಡುಗಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದಾದರೆ ಹಣಕ್ಕಾಗಿ ಬೇಡಿಕೆ ಇಡುವ ಉದ್ದೇಶ ವಿಚಾರಿಸಿ. ಆಕೆಗೆ ನಿಜವಾಗಿಯೂ ಏನಾದರೂ ಅಗತ್ಯಗಳಿದ್ದರೆ ಅದನ್ನು ಪೂರೈಸಿ ಸಂಬಂಧ ಮುಂದುವರಿಸಿ. ಇಲ್ಲವಾದರೆ ತಕ್ಷಣವೇ ಆ ಸಂಬಂಧಕ್ಕೆ ತಿಲಾಂಜಲಿ ಇಟ್ಟರೆ ನಿಮ್ಮ ಭವಿಷ್ಯವೂ ಉದ್ದಾರವಾಗಬಹುದು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ