ಬೆಂಗಳೂರು: ಸಕ್ಕರೆ ಖಾಯಿಲೆ ಇರುವವರು ತಮ್ಮ ಆಹಾರದ ಜತೆಗೆ ಈರುಳ್ಳಿಯನ್ನು ಸೇರಿಸಿಕೊಳ್ಳಲೇಬೇಕು. ಅದಕ್ಕೆ ಕಾರಣವೇನು ಗೊತ್ತಾ?
ಈರುಳ್ಳಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ. ಅದರಲ್ಲೂ ವಿಶೇಷವಾಗಿ ದೊಡ್ಡ ಗಾತ್ರದ ಕೆಂಪು ಈರುಳ್ಳಿ ಸೇವನೆ ಒಳ್ಳೆಯದು. ಹಾಗಂತ ಸ್ಪ್ರಿಂಗ್ ಆನಿಯನ್ ಸೇವಿಸಿ ಪ್ರಯೋಜನವಿಲ್ಲ. ಯಾಕೆಂದರೆ ಇದರಲ್ಲಿ ನಾರಿನಂಶ ಕಡಿಮೆ.
ಅಷ್ಟೇ ಅಲ್ಲ ಈರುಳ್ಳಿಯಲ್ಲಿರುವ ಗ್ಲೈಕೆಮಿಕ್ ಅಂಶ ಮಧುಮೇಹಿಗಳಿಗೆ ಅಗತ್ಯವಾದಷ್ಟೇ ಇದೆ. ಈ ಅಂಶ ಆಹಾರದಲ್ಲಿರುವ ಗ್ಲುಕೋಸ್ ಅಂಶ ರಕ್ತಕ್ಕೆ ಸೇರ್ಪಡೆಯಾಗುವುದನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಮಧುಮೇಹಿಗಳು ಸಲಾಡ್ ರೂಪದಲ್ಲಿಯೋ, ಸ್ಯಾಂಡ್ ವಿಚ್ ರೂಪದಲ್ಲಿಯೋ ಈರುಳ್ಳಿ ಹೇರಳವಾಗಿ ಸೇವಿಸುವುದು ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.