ನವದೆಹಲಿ: ಪುಟ್ಟ ಪಾಪುವಿಗೆ ಆರು ತಿಂಗಳು ಕಳೆದ ಕೂಡಲೇ ಅಮ್ಮನ ಎದೆಹಾಲಿನ ಹೊರತಾಗಿ ಏನೆಲ್ಲಾ ಸೇವಿಸಲು ಕೊಡಬಹುದು ಎಂದು ಯೋಚಿಸುವಾಗ ಥಟ್ಟನೆ ನೆನಪಾಗುವುದು ಹಣ್ಣಿನ ರಸ. ಆದರೆ ಹಾಗೆ ಮಾಡಬೇಡಿ!
ಹಣ್ಣು ಆರೋಗ್ಯಕ್ಕೆ ಉತ್ತಮ. ಹಣ್ಣಿನ ರಸ ಸೇವಿಸುತ್ತಿದ್ದರೆ, ದೇಹಕ್ಕೂ ಚೈತನ್ಯ ಬರುತ್ತದೆ ಎಂದೆಲ್ಲಾ ನಿಮ್ಮ ಆಲೋಚನೆಯಾದರೆ ಬಿಟ್ಟು ಬಿಡಿ. ಒಂದು ವರ್ಷದೊಳಗಿನ ಮಕ್ಕಳಿಗೆ ಹಣ್ಣಿನ ರಸ ಉತ್ತಮವಲ್ಲ ಎಂದು ತಜ್ಞರು ಹೇಳುತ್ತಾರೆ.
ಹಣ್ಣಿನ ರಸದಲ್ಲಿ ಡಯಟಿಂಗ್ ಫೈಬರ್ ಅಂಶ ಕಡಿಮೆ. ಇದರಿಂದ ಒಂದು ವರ್ಷದೊಳಗೆ ಮಗು ಬೊಜ್ಜು ಬೆಳೆಸಿಕೊಳ್ಳುತ್ತದೆ. ಒಂದು ವರ್ಷದೊಳಗಿನ ಮಕ್ಕಳಿಗೆ ತಾಯಿಯ ಎದೆಹಾಲೇ ಸಾಕಷ್ಟಾಯಿತು ಎನ್ನುತ್ತಿದ್ದಾರೆ ಮಕ್ಕಳ ತಜ್ಞರು.
ಈ ಮೊದಲು 6 ತಿಂಗಳೊಳಗಿನ ಮಕ್ಕಳಿಗೆ ಹಣ್ಣಿನ ಜ್ಯೂಸ್ ನ ಅಗತ್ಯವಿಲ್ಲ ಎಂದು ಈ ಮೊದಲು ನಂಬಲಾಗಿತ್ತು. ಆದರೆ ಇದೀಗ ಇದನ್ನು ಒಂದು ವರ್ಷದ ಮಕ್ಕಳಿಗೆ ವಿಸ್ತರಿಸಲಾಗಿದೆ. ಇಷ್ಟು ಸಣ್ಣ ಮಕ್ಕಳಿಗೆ ಹಣ್ಣಿನ ರಸದಂತಹ ಆಹಾರ ವಸ್ತುಗಳ ಅಗತ್ಯವೇ ಇಲ್ಲ ಎಂದು ತಜ್ಞರು ವಿವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ