ಬೆಂಗಳೂರು : ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ ಬಳಸಬಹುದು ಅಂತಾ ತಿಳಿದುಕೊಳ್ಳಿ.
* ಸಾಮಾನ್ಯವಾಗಿ ಲೆದರ್ ಶೂ ಗಳಿಗಾದ ಕಲೆ ಹೋಗುವುದಿಲ್ಲ. ಆಗ ನೇಲ್ ಪಾಲಿಶ್ ರಿಮೂವರ್ ನೆರವಿಗೆ ಬರುತ್ತೆ. ಇದರಿಂದ ಶೂ ಕ್ಲೀನ್ ಮಾಡಬಹುದು.
* ಕೆಲವೊಮ್ಮೆ ಫೆವಿಕ್ವಿಕ್ ಕೈಗೆ ಅಂಟಿ ಬಿಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಹೋಗುವುದಿಲ್ಲ. ನೇಲ್ ಪಾಲಿಶ್ ರಿಮೂವರ್ ನಿಂದ ಇದನ್ನು ಸುಲಭವಾಗಿ ತೆಗೆಯಬಹುದು.
* ಲೋಹದ ಸ್ಟಿಕ್ಕರ್ ತೆಗೆಯುವುದು ಸುಲಭವಲ್ಲ. ಒಂದು ವೇಳೆ ಸ್ಟಿಕ್ಕರ್ ಸುಲಭವಾಗಿ ಬಂದ್ರೂ ಅದರ ಕಲೆ ಹಾಗೆ ಉಳಿದುಬಿಡುತ್ತದೆ. ಆಗ ನೇಲ್ ಪಾಲಿಶ್ ರಿಮೂವರ್ ಬಳಸಿದ್ರೆ ಕಲೆ ಸುಲಭವಾಗಿ ಹೋಗುತ್ತದೆ.
* ಬಟ್ಟೆಯ ಮೇಲೆ ಶಾಯಿ ಕಲೆಯಾದ್ರೆ ರಿಮೂವರ್ ಬಳಸಿ. ಕಲೆಯಾದ ಜಾಗಕ್ಕೆ ರಿಮೂವರ್ ಹಚ್ಚಿ ನಂತ್ರ ಸೋಪಿನಿಂದ ತೊಳೆಯಿರಿ.
*ನೆಲದ ಮೇಲಿನ ಕಲೆಯನ್ನು ಕೂಡ ರಿಮೂವರ್ ಮೂಲಕ ಸುಲಭವಾಗಿ ಕ್ಲೀನ್ ಮಾಡಬಹುದು. ಕಲೆಯಾದ ಜಾಗಕ್ಕೆ ನೇಲ್ ಪಾಲಿಶ್ ರಿಮೂವರ್ ಹಾಕಿ ತಿಕ್ಕಿದ್ರೆ ಕಲೆ ಮಾಯವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ