Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಹುಬೇಗನೆ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ಆರೋಗ್ಯಕರ ವಿಧಾನ ಅನುಸರಿಸಿ

ಬಹುಬೇಗನೆ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ಆರೋಗ್ಯಕರ ವಿಧಾನ ಅನುಸರಿಸಿ
ಬೆಂಗಳೂರು , ಮಂಗಳವಾರ, 14 ಸೆಪ್ಟಂಬರ್ 2021 (07:06 IST)
Weight Increase : ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿದರೆ, ದೇಹ ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿ ಇರುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸಲಹೆಗಳು

ತೂಕ ಹೆಚ್ಚಿಸಿಕೊಳ್ಳಬೇಕು ಎಂಬ ಆಸೆ ಇದ್ದರೆ ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸುವುದು ಮತ್ತು ಆಹಾರ ಕ್ರಮದ ಬಗ್ಗೆ ಜಾಗರೂಕತೆ ವಹಿಸುವುದು ಬಹಳ ಅಗತ್ಯ. ಅದಕ್ಕಾಗಿ ಸೂಕ್ತ ಆಹಾರ ಕ್ರಮ ಮತ್ತು ವ್ಯಾಯಾಮದ ಯೋಜನೆ ಹಾಕಿಕೊಳ್ಳಬೇಕು.
ಆ ಮೂಲಕ ನೀವು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳಬಹುದು. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿದರೆ, ದೇಹ ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿ ಇರುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸಲಹೆಗಳು:
ಆಯುರ್ವೇದದ ಮೂಲಕ ತೂಕ ಹೆಚ್ಚಿಸಿಕೊಳ್ಳುವ ವಿಧಾನ
ಅಶ್ವಗಂಧ ಪುಡಿ ಮತ್ತು ಹಾಲು : ತೂಕ ಹೆಚ್ಚಿಸಿಕೊಳ್ಳಬೇಕಾದರೆ ಹಾಲು ಕುಡಿಯಬೇಕು. ಹಾಲಿನಲ್ಲಿ ಆರೋಗ್ಯಕ್ಕೆ ಉಪಯುಕ್ತವಾದ ಹಲವಾರು ಪೌಷ್ಟಿಕಾಂಶಗಳಿವೆ. ನಿತ್ಯವೂ ಹಾಲಿಗೆ ಅಶ್ವಗಂಧ ಪುಡಿ ಹಾಕಿಕೊಂಡು ಕುಡಿಯುವುದರಿಂದ ತೂಕ ಹೆಚ್ಚಲು ಸಹಾಯ ಆಗುತ್ತದೆ.
ಮೊಸರು ಮತ್ತು ಬಾಳೆಹಣ್ಣು: ಬಾಳೆಹಣ್ಣು ಮತ್ತು ಹಾಲು ತೂಕ ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿ. ಬೆಳಗ್ಗಿನ ಹೊತ್ತು ಬಾಳೆಹಣ್ಣು ಮತ್ತು ಹಾಲನ್ನು ಜೀರ್ಣ ಮಾಡಿಕೊಳ್ಳಲು ಕಷ್ಟ ಆಗುವವರು, ಅದರ ಬದಲಿಗೆ ಬೆಳಗ್ಗೆ ಮೊಸರು ಮತ್ತು ಬಾಳೆ ಹಣ್ಣು ಸೇವಿಸಬಹುದು. ಅದರಿಂದ ತೂಕ ಹೆಚ್ಚುತ್ತದೆ.
ಹಾಲು ಮತ್ತು ಶತಾವರಿ ಪುಡಿ : ಶತಾವರಿ ಪುಡಿಯನ್ನು ಆಯುರ್ವೇದದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಅದನ್ನು ಹಾಲಿನೊಂದಿಗೆ ಸೇವಿಸಿದರೆ ತೂಕ ಹೆಚ್ಚುತ್ತದೆ. ಅದನ್ನು ತೆಗೆದುಕೊಳ್ಳುವಾಗ, ನೀವು ಅಧಿಕ ಪ್ರೋಟೀನ್ವುಳ್ಳ ಆಹಾರ ಸೇವಿಸುವುದು ಕೂಡ ಅಗತ್ಯವಾಗುತ್ತದೆ. ಅದರೊಂದಿಗೆ ನೀವು ಹಾಲು, ಮೊಸರು, ಮಜ್ಜಿಗೆ ಅಥವಾ ಸೋಯಾಬೀನನ್ನು ಸೇವಿಸಬಹುದು.
ಖರ್ಜೂರ : ತೂಕ ಹೆಚ್ಚಳದಲ್ಲಿ ಖರ್ಜೂರ ತುಂಬಾ ಪ್ರಯೋಜನಕಾರಿ. ತೂಕ ಹೆಚ್ಚಿಸಿಕೊಳ್ಳಬೇಕು ಎಂದಿದ್ದರೆ, ದಿನಕ್ಕೆ 5 ಖರ್ಜೂರ ತಿನ್ನಬೇಕು. ಬೇಗ ತೂಕ ಹೆಚ್ಚಿಸಿಕೊಳ್ಳಬೇಕು ಎಂದಿದ್ದರೆ, ಹಾಲಿನೊಂದಿಗೆ ಖರ್ಜೂರ ಸೇವಿಸಿ.
ಆಹಾರಕ್ರಮದ ಮೂಲಕ ತೂಕ ಹೆಚ್ಚಿಸಿಕೊಳ್ಳುವ ವಿಧಾನ
ಅಧಿಕ ಕ್ಯಾಲೋರಿ : ತೂಕ ಹೆಚ್ಚಬೇಕೆಂದಿದ್ದರೆ ಅಧಿಕ ಕ್ಯಾಲೋರಿಯ ಆಹಾರ ಸೇವಿಸಿ. ಅದಕ್ಕಾಗಿ ಬ್ರೆಡ್, ಅನ್ನ, ಆಲೂಗೆಡ್ಡೆ, ಗೆಣಸು ಮತ್ತು ಕೆನೆಯುಕ್ತ ಹಾಲನ್ನು ಸೇವಿಸಿ. ಮೊಸರು, ಪನ್ನೀರ್, ರವೆ, ಬೆಲ್ಲ, ಚಾಕೊಲೇಟ್ , ಬಾಳೆಹಣ್ಣು, ಮಾವಿನ ಹಣ್ಣು, ಚಿಕ್ಕು, ಲೀಚಿ, ಖರ್ಜೂರ, ಬೆಣ್ಣೆ, ಮನೆ ತುಪ್ಪ ಇತ್ಯಾದಿಗಳನ್ನು ತಿನ್ನಿ.
ಊಟದ ನಡುವಿನ ವಿರಾಮ ಕಡಿಮೆ ಮಾಡಿ : ನಿಮ್ಮ ಎರಡು ಊಟದ ಮಧ್ಯೆ ಏನನ್ನಾದರೂ ತಿನ್ನಿ. ಮನೆಯಲ್ಲೇ ತಯಾರಿಸಿದ ಲಡ್ಡು, ಮಿಲ್ಕ್ ಶೇಕ್ , ಬೇಯಿಸಿದ ಕಡಲೆ, ಪನ್ನೀರ್ ಸ್ಯಾಂಡ್ವಿಚ್, ಸಬ್ಬಕ್ಕಿ ಪಾಯಸ, ಜೋಳದ ಸಲಾಡ್, ಖರ್ಜೂರ, ಬೆಲ್ಲ , ಕಡಲೆ, ಬಾದಾಮಿ-ಒಣ ದ್ರಾಕ್ಷಿ ತಿನ್ನಬಹುದು. ಅದು ನಿಮಗೆ ಶಕ್ತಿ ನೀಡುತ್ತದೆ ಹಾಗೂ ತೂಕವನ್ನೂ ಹೆಚ್ಚಿಸುತ್ತದೆ.
ಆರೋಗ್ಯಕರ ಕೊಬ್ಬು ಅಗತ್ಯ : ನಿಮ್ಮ ಆಹಾರದಲ್ಲಿ ಅಧಿಕ ಕೊಬ್ಬಿನ ತಿನಿಸುಗಳನ್ನು ಸೇರಿಸಿಕೊಳ್ಳಿ. ಅದಕ್ಕಾಗಿ ನೀವು ಶೇಂಗಾ ಬೀಜ, ಎಳ್ಳು ಬೀಜ, ಬಾದಾಮಿ, ವಾಲ್ನಟ್, ಪಿಸ್ತಾ, ಸೂರ್ಯಕಾಂತಿ ಬೀಜ, ಕುಂಬಳಕಾಯಿ ಬೀಜ ಮುಂತಾದವುಗಳನ್ನು ಸೇವಿಸಿ. ಸಾಸಿವೆ ಎಣ್ಣೆ, ಆಲಿವ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ, ತುಪ್ಪ ಅಥವಾ ತೆಂಗಿನೆಣ್ಣೆಯನ್ನು ಆಹಾರದಲ್ಲಿ ಬಳಸಬಹುದು.
ತೂಕ ಹೆಚ್ಚಿಸುವ ಹಣ್ಣು ಮತ್ತು ತರಕಾರಿಗಳು : ತೂಕ ಹೆಚ್ಚಿಸಿಕೊಳ್ಳಲು ನೀವು ಬಾಳೆಹಣ್ಣು, ಮಾವಿನ   ಹಣ್ಣು, ಚಿಕ್ಕು, ಲಿಚೀ, ದ್ರಾಕ್ಷಿ, ಸೀತಾಫಲ, ಖರ್ಜೂರದಂತಹ ಹಣ್ಣುಗಳು ಮತ್ತು ಆಲೂಗಡ್ಡೆ, ಗೆಣಸು ಮತ್ತು ಕ್ಯಾರೆಟ್ನಂತಹ ತರಕಾರಿಗಳನ್ನು ಬಳಸಬಹುದು.
ಅಧಿಕ ಪ್ರೊಟೀನ್ ಆಹಾರ : ಸ್ನಾಯುಗಳನ್ನು ಬಲಪಡಿಸಲು ಅಧಿಕ ಪ್ರೊಟೀನ್ವುಳ್ಳ ಆಹಾರ ತಿನ್ನಿ. ಧಾನ್ಯಗಳು, ರಾಜ್ಮಾ, ಕಡಲೆ ಕಾಳು, ಉದ್ದಿನ ಕಾಳು, ಮೀನು, ಮಾಂಸ, ಮೊಸರು ಮತ್ತು ಮೊಟ್ಟೆ ತಿನ್ನಿ.
ಹೆಚ್ಚು ಶಕ್ತಿಯುತ ಆಹಾರ ಸೇವಿಸಿ : ಪ್ರತಿನಿತ್ಯ ಅಗತ್ಯ ಇರುವುದಕ್ಕಿಂತ ಹೆಚ್ಚಿನ ಕ್ಯಾಲೋರಿ ಸೇವಿಸಿ. ತೂಕ ಏರಿಸಬೇಕೆಂದು ಇದ್ದರೆ, ನಿತ್ಯ ಅಗತ್ಯ ಇರುವ ಕ್ಯಾಲೋರಿಗಿಂತ 300 ರಿಂದ 400 ಕ್ಯಾಲೋರಿ ಸೇವಿಸಿ.
ಸಣ್ಣ ಪ್ರಮಾಣದ ಆಹಾರ : ತೂಕ ಹೆಚ್ಚಿಸಬೇಕೆಂದಿದ್ದರೆ, ಒಂದೇ ಸಲಕ್ಕೆ ಭರ್ಜರಿ ಊಟ ಮಾಡುವ ಬದಲು, ಆಗಾಗ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿರಿ. ಒಮ್ಮೆಲೆ ಅತಿಯಾಗಿ ತಿನ್ನುವುದರಿಂದ ಅಜೀರ್ಣ ಮತ್ತಿತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ವ್ಯಾಯಾಮದ ನಂತರ ಪ್ರೋಟೀನ್ : ತೂಕ ಹೆಚ್ಚಿಸಬೇಕೆಂದರೆ ವ್ಯಾಯಾಮ ಮಾಡಿದ ಬಳಿಕ ಅಧಿಕ ಪ್ರೋಟೀನ್ಯುಕ್ತಆಹಾರ ಸೇವಿಸಿ. ಅದು ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ನಿವು ಕಡಿಮೆ ಕೊಬ್ಬಿನ ಪನ್ನಿರ್, ಬೇಯಿಸಿದ ಮೊಟ್ಟೆ ಅಥವಾ ಬೇಯಿಸಿದ ಕೋಳಿ ಮಾಂಸ ತಿನ್ನಬಹುದು.
ತೂಕ ಹೆಚ್ಚಿಸಲು ಜೀವನ ಶೈಲಿ ಬದಲಾವಣೆಯ ವಿಧಾನ
1.ತೂಕ ಹೆಚ್ಚಿಸಲು ವ್ಯಾಯಾಮ ಅಗತ್ಯ. ಅದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅವುಗಳಿಗೆ ಶಕ್ತಿ ನೀಡುತ್ತದೆ.
2.ಯೋಗ ಹಸಿವನ್ನು ಸುಧಾರಿಸುತ್ತದೆ. ಒತ್ತಡ ನಿವಾರಣೆಗೆ, ಚಯಾಪಚಯ ಕ್ರಿಯೆಯ ಸುಧಾರಣೆಗೆ ಮತ್ತು ಸಾಮರ್ಥ್ಯ ಹೆಚ್ಚಿಸಲು ಯೋಗಾಭ್ಯಾಸ ಮಾಡಬೇಕು.
3.ತೂಕ ಹೆಚ್ಚಿಸಬೇಕೆಂದರೆ ಜಂಕ್ ಪುಡ್ ಸೇವನೆ ಕಡಿಮೆ ಮಾಡಿ. ಇಲ್ಲವಾದಲ್ಲಿ ಅದು ಅಸಪರ್ಮಕ ತೂಕ ಹೆಚ್ಚಳಕ್ಕೆ ಕಾರಣ ಆಗಬಹುದು.
4.ನಿತ್ಯವೂ ನಿಮ್ಮ ತೂಕವನ್ನು ಡೈರಿ ಅಥವಾ ಅ್ಯಪ್ನಲ್ಲಿ ಬರೆದಿಟ್ಟುಕೊಳ್ಳಿ. ಅದು ನಿಮ್ಮ ಗುರಿ ಸಾಧನೆಗೆ ಸ್ಪೂರ್ತಿ ನೀಡುತ್ತದೆ.
5.ತೂಕ ಹೆಚ್ಚಲು ಸಮಯ ತಗಲುತ್ತದೆ, ಹಾಗಾಗಿ ನಿಮ್ಮ ಪ್ರಯತ್ನದ ಜೊತೆಗೆ ತಾಳ್ಮೆಯೂ ಇರಲಿ.


Share this Story:

Follow Webdunia kannada

ಮುಂದಿನ ಸುದ್ದಿ

ಚಾಕೊಲೇಟ್ ಖರೀದಿ ಮಾಡುವಾಗ ಈ ಅಂಶಗಳನ್ನು ಗಮನಿಸ್ತಿರಾ?