ಬೆಂಗಳೂರು: ಮಧ್ಯ ವಯಸ್ಸಿನವರು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಷ್ಟು ಒಳ್ಳೆಯದು ಎಂದು ಇತ್ತೀಚೆಗಿನ ಅಧ್ಯಯನ ವರದಿಯೊಂದು ಹೇಳಿದೆ.
ನಡು ವಯಸ್ಸಿನಲ್ಲಿ ಮಿಲನ ಕ್ರಿಯೆಯಲ್ಲಿ ಹೆಚ್ಚು ತೊಡಗಿದಷ್ಟು ನಿಮ್ಮ ಮೆದುಳಿನ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.
ಆಕ್ಸ್ ಫರ್ಡ್ ವಿವಿಯ ಸಂಶೋಧಕರ ಪ್ರಕಾರ ಸ್ಮರಣ ಶಕ್ತಿ ಮಾತ್ರವಲ್ಲದೆ, ಮೆದುಳಿನ ಇತರ ಚಟುವಟಿಕೆಗಳೂ ಚುರುಕುಗೊಳ್ಳಲು ನಿಯಮಿತವಾಗಿ ಸೆಕ್ಸ್ ಮಾಡುವುದು ಸಹಾಯ ಮಾಡುತ್ತದಂತೆ. 50 ರಿಂದ 80 ವರ್ಷವರೆಗಿನ ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.