ಬೆಂಗಳೂರು : ಬೇಳೆ ಕಾಳುಗಳನ್ನು ಹೆಚ್ಚೆಚ್ಚು ಸಂಗ್ರಹಿಸಿಡಲು ಸಾಧ್ಯವಿಲ್ಲ. ಯಾಕೆಂದರೆ ಇದು ತೇವಾಂಶದಿಂದ ಹುಳ ಹಿಡಿದು ಹಾಳಾಗುತ್ತದೆ. ಆದರೆ ಈ ಉಪಾಯದ ಮೂಲಕ ಬೇಳೆಕಾಳುಗಳನ್ನು ಹಲವು ದಿನಗಳ ಕಾಲ ಸಂಗ್ರಹಿಸಿ ಇಡಬೇಕು.
ಧಾನ್ಯ, ಬೇಳೆ ಕಾಳುಗಳನ್ನು ಮಾರುಕಟ್ಟೆಯಿಂದ ಬಂದ ಬಳಿಕ ಅದನ್ನು ಒಣಗಿರುವ ಪಾತ್ರೆಯಲ್ಲಿ ಹಾಕಿ ಅದಕ್ಕೆ 2 ಚಮಚ ಸಾಸಿವೆ ಎಣ್ಣೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ಮಾಡುವುದರಿಂದ ವಾತಾವರಣದ ತೇವಾಂಶದಿಂದ ಮತ್ತು ಕೀಟಗಳಿಂದ ಬೇಳೆಕಾಳುಗಳು ಹಾಳಾಗುವುದಿಲ್ಲ.