ಬೆಂಗಳೂರು: ಹಳ್ಳಿ ಕಡೆ ಗದ್ದೆ ಬದಿಯಲ್ಲಿ ಸೊಂಪಾಗಿ ಬೆಳೆದಿರುವ ಸೊಪ್ಪು ಒಂದೆಲಗ. ಇದಕ್ಕೆ ಬ್ರಾಹ್ಮಿ, ಉರಗೆ, ತಿಮರೆ ಅಂತೆಲ್ಲಾ ನಾನಾ ಹೆಸರುಗಳಿವೆ. ಇದರ ಆರೋಗ್ಯಕರ ಅಂಶಗಳೂ ಹಲವು. ಯಾವುದೆಲ್ಲಾ ನೋಡೋಣ.
ಮುಖ್ಯವಾಗಿ ಇದು ಜ್ಞಾಪಕ ಶಕ್ತಿಗೆ ಉಪಯುಕ್ತ. ಇದನ್ನು ಖಾಲಿ ಹೊಟ್ಟೆಯಲ್ಲಿ ದಿನಂಪ್ರತಿ ಮಕ್ಕಳಿಗೆ ಹಸಿ ಸೊಪ್ಪನ್ನು ಜಗಿಯಲು ನೀಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುವುದಲ್ಲದೆ, ಓದಿನಲ್ಲೂ ಮುಂದೆ ಬರುತ್ತಾರೆ.
ಇದು ಶೀತ ಗುಣವನ್ನು ಹೊಂದಿರುವುದರಿಂದ ಉಷ್ಣ ಪ್ರಕೃತಿಯವರಿಗೆ ಇದರಿಂದ ಮಾಡುವ ವರೈಟಿ ಪದಾರ್ಥಗಳು ಹೇಳಿ ಮಾಡಿಸಿದ ಆಹಾರ. ಇದರ ತಂಬುಳಿ, ಚಟ್ನಿ ಬೇಸಿಗೆಯಲ್ಲಿ ಮಾಡಿ ತಿನ್ನುವುದರಿಂದ ದೇಹ ತಂಪಾಗಿರುತ್ತದೆ.
ಇನ್ನು ಇದರ ಎಣ್ಣೆ ಮಾಡಿ ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ, ಒತ್ತಡ, ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಗೂ ಪರಿಹಾರ ಕೊಡುತ್ತದೆ. ರಕ್ತ ಹೀನತೆ, ನರ ದೌರ್ಬಲ್ಯ ಸಮಸ್ಯೆಗಳಿಗೂ ಇದರ ಎಲೆ ತಿನ್ನುವುದು ಉತ್ತಮ ಮನೆ ಔಷಧಿ ಎನ್ನಲಾಗುತ್ತದೆ. ಆದರೆ ಇದರ ಎಲೆಯನ್ನು ರಾತ್ರಿ ವೇಳೆ ಸೇವಿಸಬಾರದೆಂಬ ನಂಬಿಕೆಯೂ ಇದೆ. ರಾತ್ರಿ ವೇಳೆ ಇದರ ಎಲೆಗಳು ವಿಷಕಾರಿ ರಾಸಾಯನಿಕ ಹೊರ ಸೂಸುತ್ತವೆ ಎಂಬ ನಂಬಿಕೆಯೂ ಹಳ್ಳಿ ಕಡೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ