ಬೆಂಗಳೂರು : ಕೆಲವರ ಕೈಬೆರಳು, ಕಾಲ್ಬೆರಳಿನಲ್ಲಿ ಉಗುರುಸುತ್ತು ಆಗುತ್ತದೆ. ಇದರಿಂದ ತುಂಬಾ ನೋವು ಇರುತ್ತದೆ. ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಇದನ್ನು ಮನೆಮದ್ದಿನಿಂದ ವಾಸಿಮಾಡಿಕೊಳ್ಳಬಹುದು.
ಏಲಕ್ಕಿ 1ನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಿ, ಅದಕ್ಕೆ ಅರಶೀನ ಪುಡಿ 1 ಟೀ ಸ್ಪೂನ್, ಕಾಳುಮೆಣಸಿನ ಪುಡಿ 1 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ನಿಂಬೆಹಣ್ಣನ್ನು ಅರ್ಧ ಭಾಗ ಮಾಡಿಕೊಂಡು ಈ ಮಿಶ್ರಣವನ್ನು ಅದರೊಳಗೆ ತುಂಬಿಸಿ. ನಂತರ ಆ ನಿಂಬೆಹಣ್ಣನ್ನು ನಿಮ್ಮ ಉಗುರುಸುತ್ತು ಆದ ಬೆರಳಿಗೆ ಟೋಪಿ ತರಹ ಹಾಕಿಕೊಳ್ಳಿ. ಇದನ್ನು ರಾತ್ರಿ ಹೊತ್ತು ಮಾಡಬೇಕು. ಹಾಗೇ 8-10 ಗಂಟೆಗಳ ಕಾಲ ಅದು ಹಾಗೇ ಇರಬೇಕು. ಹೀಗೆ ಮಾಡುವುದರಿಂದ 3 ದಿನದಲ್ಲಿ ಉಗುರುಸುತ್ತು ವಾಸಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.