Webdunia - Bharat's app for daily news and videos

Install App

ಬೇಸಿಗೆಯಲ್ಲಿ ಕೂಲ್ ಆಗಿರಲು ನಿಮ್ಮ ಉಡುಪುಗಳು ಹೀಗಿರಲಿ

Webdunia
ಬುಧವಾರ, 18 ಏಪ್ರಿಲ್ 2018 (12:23 IST)
ಬೆಂಗಳೂರು : ಇಷ್ಟುದಿನ ಚಳಿಗಾಲವಿತ್ತು. ಯಾವುದೇ ಉಡುಪು ತೊಟ್ಟರೂ ಅದರ ಮೇಲೆ ಜ್ಯಾಕೆಟ್ ಅಥವಾ ಸ್ವೆಟರ್ ಮತ್ತು ಸ್ಟೋಲ್ ಧರಿಸಿ ಬೆಚ್ಚಗಿರುತ್ತಿದ್ರಿ. ಆದ್ರೆ ಚಳಿಗಾಲ ಕಳೆದು ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗಬೇಕು. ಬೇಸಿಗೆಯಲ್ಲಿ ಕೂಲ್ ಆಗಿರಲು ಯಾವ ರೀತಿ ಉಡುಪು ಧರಿಸಬೇಕು ಅನ್ನೋದಕ್ಕೆ ಇಲ್ಲಿದೆ ಟಿಪ್ಸ್


*ಬೇಸಿಗೆಯಲ್ಲಿ ನಿಮ್ಮ ಉಡುಪು ಸಡಿಲವಾಗಿದ್ದಷ್ಟೂ ಆರಾಮಾಗಿ ಇರಬಹುದು. ಬಿಗಿಯಾದ ಉಡುಪು ತೊಡುವುದರಿಂದ ಸೆಕೆ ಉಂಟಾಗಿ ದೇಹ ಹೆಚ್ಚು ಬೆವರುತ್ತದೆ. ಹೀಗಾಗಿ ಸಡಿಲವಾದ ಬಟ್ಟೆ ತೊಟ್ಟರೆ ಕೂಲ್ ಆಗಿ ಇರಬಹುದು.

*ಪಾಲಿಸ್ಟರ್ ಮತ್ತು ರೇಯಾನ್ ಬಟ್ಟೆಗಿಂತ ಕಾಟನ್ ಉಡುಪುಗಳು ಬೇಸಿಗೆಗೆ ಸೂಕ್ತ. ಕಾಟನ್ ಬಟ್ಟೆ ಬೆವರನ್ನು ಬೇಗನೆ ಹೀರುತ್ತದೆ ಹಾಗೂ ಬೇಗನ ಒಣಗುತ್ತದೆ. ಆದ್ದರಿಂದ ಕಾಟನ್ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಿ.

*ಬಟ್ಟೆಯನ್ನ ಒಂದು ಬಾರಿ ತೊಟ್ಟು ಒಗೆಯದೇ ಹಾಗೇ ಧರಿಸಿದ್ರೆ ದುರ್ವಾಸನೆ ಬರುತ್ತದೆ. ಆದ್ದರಿಂದ ಒಂದು ಬಾರಿ ಧರಿಸಿದ ಉಡುಪನ್ನು ಶುಭ್ರವಾಗಿ ಒಗೆದ ನಂತರವೇ ಮತ್ತೊಮ್ಮೆ ಧರಿಸಿ

*ಬೀಡಿಂಗ್ ಹಾಗೂ ಮೆಟಲ್ ವರ್ಕ್ ಇರುವಂತಹ ಬಟ್ಟೆಗಳ ತೂಕವೂ ಹೆಚ್ಚಾಗುತ್ತದೆ ಹಾಗೇ  ವರ್ಕ್ ಮಾಡಿದ ಉಡುಪು ಮೈಗೆ ಚುಚ್ಚುವುದಲ್ಲದೆ ಹೆಚ್ಚು ಬೆವರುವಂತೆ ಮಾಡುವುದರಿಂದ ಬೇಸಿಗೆಯಲ್ಲಿ ಇಂತಹ ಉಡುಪುಗಳನ್ನ ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

*ಲೈನಿಂಗ್ ಇಲ್ಲದಂತಹ ಬಟ್ಟೆಯನ್ನ ಧರಿಸಿ. ಹಾಗೇ ಗಾಢ ಬಣ್ಣದ ಉಡುಪುಗಳು ಬಿಸಿಲನ್ನ ಹೆಚ್ಚು ಹೀರಿಕೊಳ್ಳುತ್ತವೆ. ಬೇಸಿಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪನ್ನ ಧರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments