ಬೆಂಗಳೂರು: ಕೆಲಸದ ಒತ್ತಡವೋ, ಚಿಂತೆಯೋ ನಿದ್ರೆಯ ಅವಧಿ ಕಡಿಮೆ ಮಾಡಿದ್ದೀರಾ? ಹಾಗಿದ್ದರೆ ಉದಾಸೀನ ಮಾಡಬೇಡಿ. ಅದರಿಂದ ಗಂಭೀರ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ.
ತಜ್ಞರ ಪ್ರಕಾರ ಕಡಿಮೆ ನಿದ್ರೆಯಿಂದ ಮಕ್ಕಳಾಗೋದು ಕಷ್ಟವಂತೆ! ಅಂದರೆ ನಿದ್ರೆ ಅವಧಿ ಕಡಿಮೆಯಾದರೆ ಫಲವಂತಿಕೆ ಕಡಿಮೆಯಾಗುತ್ತದೆ.
ಸುಖವಾದ ನಿದ್ರೆ ಮಾಡುವವರಿಗೆ ಹೋಲಿಸಿದರೆ ಕಡಿಮೆ ನಿದ್ರೆ ಮಾಡುವವರಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಎಂದು ಡೆನ್ಮಾರ್ಕ್ ನ ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ. ಇದು ಪುರುಷರಲ್ಲಿ ಮಾತ್ರವಲ್ಲ. ಮಹಿಳೆಯರಲ್ಲೂ ಕಡಿಮೆ ನಿದ್ರೆಯಿಂದ ಫಲವಂತಿಕೆ ಕಡಮೆಯಾಗುವ ಅಪಾಯವಿದೆಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ