Webdunia - Bharat's app for daily news and videos

Install App

ಮನಿ ಪ್ಲ್ಯಾಂಟ್ ಯಾವ ದಿಕ್ಕಿನಲ್ಲಿಡಬೇಕು?

Webdunia
ಬುಧವಾರ, 29 ಸೆಪ್ಟಂಬರ್ 2021 (10:04 IST)
ಮನೆಯ ಒಳಗೆ ಬೆಳೆಸುವುದರಿಂದ  ಹೆಚ್ಚು ಮಂಗಳಕರವಾಗಿರುತ್ತದೆ. ನೀವು ಮನಿ ಪ್ಲಾಂಟ್ ಅನ್ನು ಮನೆಗೆ ತರಲು ನಿರ್ಧರಿಸಿದ್ದರೆ, ಅದನ್ನು ಸರಿಯಾದ ಸ್ಥಳದಲ್ಲಿ ಇರಿಸಲು ಈ ವಾಸ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯ. 

ಮನಿ ಪ್ಲಾಂಟ್ ಭಾರತದ ಮನೆಯ ಒಳಗೆ ಬೆಳೆಯು ಸಸ್ಯಗಳಲ್ಲಿ ಅತ್ಯಂತ ಪ್ರಸಿದ್ಧ ಸಸ್ಯ ಎಂದರೆ ತಪ್ಪಾಗಲಾರದು. ಮನಿ ಪ್ಲಾಂಟ್ನ ಹೃದಯ ಆಕಾರದ ಎಲೆಗಳು ಯಾವುದೇ ಅವ್ಯವಸ್ಥೆ ಇಲ್ಲದೆ, ಅಲಂಕಾರಕ್ಕೆ ಹೆಸರುವಾಸಿಯಾಗಿದೆ. ಇದು ಅಲಂಕಾರಿಕ ಆಕರ್ಷಣೆ  ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಏಕೆಂದರೆ ಇದನ್ನು ನೈಸರ್ಗಿಕ ಗಾಳಿ ಶುದ್ಧೀಕರಣ ಎಂದೂ ಕರೆಯುತ್ತಾರೆ. ಇದಲ್ಲದೆ, ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯ ಜೊತೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದನ್ನು ಮನೆಯ ಒಳಗೆ ಬೆಳೆಸುವುದರಿಂದ  ಹೆಚ್ಚು ಮಂಗಳಕರವಾಗಿರುತ್ತದೆ. ನೀವು ಮನಿ ಪ್ಲಾಂಟ್ ಅನ್ನು ಮನೆಗೆ ತರಲು ನಿರ್ಧರಿಸಿದ್ದರೆ, ಅದನ್ನು ಸರಿಯಾದ ಸ್ಥಳದಲ್ಲಿ ಇರಿಸಲು ಈ ವಾಸ್ತು ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯ. 
ವಾಸ್ತು ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಎಲ್ಲಿ ಇಡಬೇಕು?

ಲಿವಿಂಗ್ ರೂಮ್: ವಿವಿಧ ವಾಸ್ತು ತಜ್ಞರ ಪ್ರಕಾರ, ಅದೃಷ್ಟ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಮನಿ ಪ್ಲಾಂಟ್ ಅನ್ನು ಕೋಣೆಯ ಆಗ್ನೇಯ ಮೂಲೆಯಲ್ಲಿ ಇಡಬೇಕು. ಈ ದಿಕ್ಕನ್ನು ಶುಕ್ರ ಮತ್ತು ಗಣೇಶ ಆಳುವುದರಿಂದ, ಇಬ್ಬರೂ ಸಂಪತ್ತು ಮತ್ತು ಅದೃಷ್ಟವನ್ನು  ತರುತ್ತಾರೆ ಎಂದು ನಂಬಲಾಗಿದೆ. ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗಲು ಮನಿ ಪ್ಲಾಂಟ್ ಅನ್ನು ಸರಿಯಾಗಿ ಇಡುವುದು ಬಹಳ ಮುಖ್ಯವಾಗುತ್ತದೆ.
ಬೆಡ್ ರೂಂ: ಮನಿ ಪ್ಲಾಂಟ್ ಅನ್ನು ಮಲಗುವ ಕೋಣೆಯಲ್ಲಿ ಹಾಗೆಯೇ ಹಾಸಿಗೆಯ ಎಡ ಅಥವಾ ಬಲ ಭಾಗದಲ್ಲಿ ಇಡಬಹುದು ಆದರೆ  ಕಾಲಿನ ಬಳಿ ಅಥವಾ ತಲೆಯ ಬಳಿ ಇಡಬಾರದು.
ದಿಕ್ಕುಗಳಲ್ಲಿ ಇಡಬೇಡಿ: ವಾಸ್ತು ಪ್ರಕಾರ ಸಸ್ಯವನ್ನು ಉತ್ತರ ಅಥವಾ ಪೂರ್ವದ ಗೋಡೆಗಳು ಅಥವಾ ಈಶಾನ್ಯ ಮೂಲೆಯಲ್ಲಿ ಇಡುವುದು ಸೂಕ್ತವಲ್ಲ, ಏಕೆಂದರೆ ಇದು ಹಣದ ನಷ್ಟ, ಆರೋಗ್ಯ ಸಮಸ್ಯೆಗಳು ಮತ್ತು  ವೈಮನಸ್ಸುಗಳಿಗೆ ಕಾರಣವಾಗಬಹುದು. ಗುರು ಮತ್ತು ಶುಕ್ರ ಈಶಾನ್ಯ ದಿಕ್ಕನ್ನು ಆಳುವುದರಿಂದ, ಅವುಗಳು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ ಮತ್ತು ನಷ್ಟಕ್ಕೆ ಕಾರಣವಾಗುತ್ತದೆ.
ಮೂಲೆಗಳಲ್ಲಿ: ವಾಸ್ತು ಪ್ರಕಾರ, ಚೂಪಾದ ಮೂಲೆಗಳು ಆತಂಕ ಮತ್ತು  ನೆಗೆಟಿವ್ ಅಂಶಗಳ ಮೂಲವಾಗಿದೆ.ಹಾಗಾಗಿ ನಕಾರಾತ್ಮಕ ಪರಿಣಾಮಗಳನ್ನು ದೂರ ಮಾಡಲುಬ ಮನಿ ಪ್ಲಾಂಟ್ಗಳನ್ನು ಮನೆಯ ಒಳಗೆ ಇಟ್ಟುಕೊಳ್ಳುವುದುಮನೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾತ್ ರೂಂ: ಮನಿ ಪ್ಲಾಂಟ್ಗಳು ಸುಲಭವಾಗಿ ಬೆಳೆಯುತ್ತದೆ  ಆದ್ದರಿಂದ ಅವುಗಳನ್ನು  ಬಾತ್ ರೂಂಗಳಲ್ಲಿ ತೇವಾ ಹೆಚ್ಚಿರುವ ಪರಿಣಾಮ ಮೂಲೆಗಳಲ್ಲಿ ಸುಲಭವಾಗಿ ಬೆಳೆಯುತ್ತವೆ. ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು ಬಾತ್ರೂಮ್ನಲ್ಲಿ ಇಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ. ನಿಮ್ಮ ಬಾತ್ರೂಮ್ ಗಣನೀಯ ಪ್ರಮಾಣದ ನೇರ ಅಥವಾ ಪರೋಕ್ಷ ಸೂರ್ಯನ ಬೆಳಕನ್ನು ಪಡೆದರೆ ನೀವು ಅದನ್ನು ಸುಲಭವಾಗಿ ನಿರ್ವಹಿಸಬಹುದು.
ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಗಳ ಬಳಿ : ಮನಿ ಪ್ಲಾಂಟ್ಗಳು ವಿಕಿರಣಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಆದ್ದರಿಂದ ಅವುಗಳನ್ನು ಟೆಲಿವಿಷನ್ ಅಥವಾ ಕಂಪ್ಯೂಟರ್ ಅಥವಾ ವೈ-ಫೈ ರೂಟರ್ಗಳ ಬಳಿ ಇರಿಸಬಹುದು.
ಮನಿ ಪ್ಲಾಂಟ್ ಅನ್ನು ಹೇಗೆ ನಿರ್ವಹಿಸುವುದು?
ಮನಿ ಪ್ಲಾಂಟ್ಗಳನ್ನು ನೀರು ತುಂಬಿದ ಪಾತ್ರೆಯಲ್ಲಿ ಅಥವಾ ಕಾಂಡ ಕತ್ತರಿಸುವ ಮೂಲಕ ಗಿಡದ ಪಾತ್ರೆಯಲ್ಲಿ ಸುಲಭವಾಗಿ ಬೆಳೆಯಬಹುದು. ಸಸ್ಯಗಳು ಬೆಳೆಯಲು ಎಲ್ಲಾ ಖನಿಜಗಳನ್ನು ಪಡೆಯಲು ನೀರನ್ನು ಪ್ರತಿ ವಾರ ಬದಲಾಯಿಸಿ.  ಎಲೆಗಳು ಬಾಡಿ ಹೋಗಿದ್ದಾರೆ ಅದನ್ನು ತೆಗೆಯಿರಿ ಏಕೆಂದರೆ ಅದು ನಕಾರಾತ್ಮಕ ಶಕ್ತಿಯನ್ನು  ಹೆಚ್ಚು ಮಾಡುತ್ತದೆ. ನೀವು ಮನಿ ಪ್ಲಾಂಟ್ ಅನ್ನು ಮಣ್ಣಿನಲ್ಲಿ ನೆಡುತ್ತಿದ್ದರೆ, ನೀವು ಅದನ್ನು ನಿಯಮಿತವಾಗಿ ನೀರುಹಾಕುವುದನ್ನು  ಮರೆಯಬಾರದು. ಹಾಗೆಯೆ ಯಾವುದೇ ಕೀಟಗಳನ್ನು ಅದನ್ನು  ಹಾನಿ ಮಾಡಲು ಬಿಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments