ಬೆಂಗಳೂರು :ನಯವಾಗಿ ಹೊಳೆಯುವ ಕೂದಲು ನಮ್ಮದಾಗಬೇಕೆಂಬ ಆಸೆ ಹಲವರಿಗಿದೆ. ಆದರೆ ಕೆಲವರು ಕೂದಲು ತುಂಬಾ ಒರಟಾಗಿರುತ್ತದೆ. ಅಂತವರು ನಿಮ್ಮ ಕೂದಲು ನಯವಾಗಿರಬೇಕೆಂದರೆ ಇದನ್ನು ಹಚ್ಚಿ.
1 ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಮಾಡಿಕೊಳ್ಳಿ. ಬಳಿಕ ಅದಕ್ಕೆ 1 ಚಮಚ ಜೇನುತುಪ್ಪ ಮತ್ತು 1 ಚಮಚ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ. ಒಂದೇ ದಿನದಲ್ಲಿ ನಯವಾಗಿ ಹೊಳೆಯುವ ಕೂದಲು ನಿಮ್ಮದಾಗುತ್ತದೆ.