ಬೆಂಗಳೂರು: ಗಡ್ಡ ಮತ್ತು ಮೀಸೆ ಎನ್ನುವುದು ಬಲಿಷ್ಠ ಪುರುಷನ ಲಕ್ಷಣವಾಗಿದೆ. ಗಡ್ಡ ಬೆಳೆಸುವುದು ತುಂಬಾ ಸುಲಭವೆಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಗಡ್ಡ ಬೆಳೆಸುವ ಮಂದಿ ಹೆಚ್ಚಾಗುತ್ತಾ ಇದ್ದಾರೆ. ಗಡ್ಡವನ್ನು ನೈಸರ್ಗಿಕವಾಗಿ ವೇಗವಾಗಿ ಬೆಳೆಸಲು ಕೆಲವು ವಿಧಾನಗಳು ಕೂಡ ಇವೆ. ಗಡ್ಡವು ವೇಗ ಹಾಗೂ ಬಲಿಷ್ಠವಾಗಿ ಬೆಳೆಯಬೇಕೆಂದರೆ ಅದಕ್ಕೆ ಸರಿಯಾಗಿ ಪೋಷಣೆ ನೀಡಬೇಕು.
ಗಡ್ಡವು ವೇಗವಾಗಿ ಬೆಳೆಯಲು ವಾರದಲ್ಲಿ ಒಂದು ಸಲ ಮುಖದ ಸತ್ತ ಚರ್ಮವನ್ನು ತೆಗೆದುಹಾಕಬೇಕು. ಇದರಿಂದ ಗಡ್ಡ ವೇಗವಾಗಿ ಬೆಳೆಯುವುದು. ಮಸಾಜ್ ಎಣ್ಣೆಯಿಂದ ಗಡ್ಡಕ್ಕೆ ಮಸಾಜ್ ಮಾಡಿಕೊಳ್ಳಿ ಇದರಿಂದ ಗಡ್ಡದ ಬೆಳವಣಿಗೆಗೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳು ಸಿಗುತ್ತದೆ.
ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ. ಸರಿಯಾದ ನಿದ್ರೆಯಿದ್ದರೆ ಗಡ್ಡವು ವೇಗವಾಗಿ ಬೆಳೆಯುವುದು. ಪ್ರೋಟೀನ್ ನಿಂದ ದೇಹಕ್ಕೆ ಬೇಕಾಗುವಂತಹ ಸರಿಯಾದ ಪೋಷಕಾಂಶಗಳು ಸಿಗುತ್ತದೆ. ಇದರಿಂದ ಕೂದಲು ಬೆಳೆಯುವುದು. ಸರಿಯಾಗಿ ನಿದ್ರೆ ಮಾಡಿದರೆ ಕೂದಲು ವೇಗವಾಗಿ ಬೆಳೆಯಲು ನೆರವಾಗುವುದು.
ದಿನದಲ್ಲಿ ಎಂಟು ಲೋಟ ನೀರು ಕುಡಿದರೆ ಕೂದಲು ದಪ್ಪ ಹಾಗೂ ಆರೋಗ್ಯಕರವಾಗಿ ಬೆಳೆಯುವುದು. ಒತ್ತಡದಿಂದ ಮುಕ್ತವಾಗಿದ್ದರೆ ಕೂದಲು ಉದುರುವುದನ್ನು ತಪ್ಪಿಸಬಹುದು ಮತ್ತು ಬೆಳೆವಣಿಗೆ ಹೆಚ್ಚಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ