ಬೆಂಗಳೂರು : ಸಾಮಾನ್ಯವಾಗಿ ಹಸಿರು ತರಕಾರಿಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಅನಾರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಗಾಗಿ ಮನ್ಸೂನ್ ನಲ್ಲಿ ತರಕಾರಿ ಸೊಪ್ಪುಗಳನ್ನು ಸೇವನೆ ಮಾಡದಿರುವುದು ಉತ್ತಮ ಎನ್ನಲಾಗುತ್ತದೆ.
ಹೌದು. ಇದಕ್ಕೆ ಕಾರಣವೆನೆಂದರೆ ಮಳೆಗಾಲದಲ್ಲಿ ಹಲವು ರೀತಿಯ ಹುಳುಗಳು ಹುಟ್ಟಿಕೊಂಡಿರುತ್ತವೆ. ಈ ಹುಳಗಳು ಎಲೆಗಳ ಭಾಗಗಳಲ್ಲಿ ಮೊಟ್ಟೆಯನ್ನಿಡುತ್ತದೆ. ಸಾಮಾನ್ಯವಾಗಿ ಇವುಗಳ ಮೊಟ್ಟೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಈ ಹುಳುಗಳು ಮೂಲಂಗಿ, ಎಲೆಕೋಸು, ಪಾಲಕ ಮುಂತಾದ ತರಕಾರಿಗಳಲ್ಲಿ ಕಾಣ ಸಿಗುತ್ತದೆ. ಆಹಾರಗಳೊಂದಿಗೆ ಈ ಹುಳುಗಳ ಮೊಟ್ಟೆಗಳು ಹೊಟ್ಟೆ ಸೇರಿದರೆ ಯಕೃತ್ ಮತ್ತು ಮೆದುಳು ಅಥವಾ ಕರುಳಿನ ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.
ಆದ್ದರಿಂದ ತರಕಾರಿ ಸೊಪ್ಪುಗಳನ್ನು ಆಹಾರಕ್ಕಾಗಿ ಬಳಸುವುದಕ್ಕಿಂತ ಮುಂಚಿತವಾಗಿ ಎರಡು ಬಾರಿ ಬೆಚ್ಚಗಿನ ನೀರಿನಿಂದ ಅಥವಾ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಹಾಗೇ ತರಕಾರಿಗಳನ್ನು ಬೇಯಿಸಿ ತಿನ್ನವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.