ಬೆಂಗಳೂರು : ಮನುಷ್ಯರಿಗೆ ಎದುರಾಗುವ ಹಲವಾರು ಭಯಗಳಲ್ಲಿ ಕಾಮಭಯ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳಲು ಪಡುವ ಭಯವೂ ಒಂದು. ವೈದ್ಯವಿಜ್ಞಾನದಲ್ಲಿ ಇದಕ್ಕೆ ಎರೋಟೋಫೋಬಿಯಾ (Erotophobia) ಎಂದು ಕರೆಯುತ್ತಾರೆ. ಇದು ಗಂಡ-ಹೆಂಡತಿಯ ಸಂಬಂಧ ಹಾಳು ಮಾಡುತ್ತವೆ.
ಕೆಲವರಿಗೆ ಸೆಕ್ಸ್ ಸಮಯದಲ್ಲಿ ನಗ್ನರಾಗಲು ಇಷ್ಟಪಡುವುದಿಲ್ಲ. ಇವರು ಯಾರೂ ತಮ್ಮನ್ನು ನಗ್ನರಾಗಿ ನೋಡಬಾರದು ಎಂದು ಬಯಸಿರುತ್ತಾರೆ. ಇದು ಅವರ ಸೆಕ್ಸ್ ಜೀವನದ ಜೊತೆಗೆ ದಾಂಪತ್ಯ ಜೀವನವನ್ನು ಹಾಳುಮಾಡಬಹುದು.
ಮತ್ತೆ ಕೆಲವರು ನಗ್ನರಾಗಲು ಭಯಪಡುತ್ತಾರೆ. ಕಾರಣ ಅವರಿಗೆ ತಮ್ಮ ದೇಹದ ಆಕಾರದ ಬಗ್ಗೆ ಇರುವ ಭಯ, ತಮ್ಮ ಶರೀರ ಅಸಮರ್ಪಕವಾಗಿದೆ ಎಂದು ಪರಿಗಣಿಸಬಹುದು ಎಂಬ ಭಯವಿರುತ್ತದೆ. ಆದರೆ ಇವರು ಲೈಂಗಿಕ ಸಂಬಂಧವನ್ನು ಇಷ್ಟಪಡುವುದಿಲ್ಲವೆಂದಲ್ಲ, ಆದರೆ ತಮ್ಮ ಶರೀರದ ಆಕಾರದ ಬಗ್ಗೆ ಈ ವ್ಯಕ್ತಿಗಳು ತೀರಾ ಅಸುರಕ್ಷಿತ ಭಾವನೆಯನ್ನು ಹೊಂದಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ