ಬೆಂಗಳೂರು : ಗರ್ಭಧರಿಸಿದಾಗ ತಾಯಂದಿರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆಚ್ಚಾಗಿ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತೆ. ಅದು ಕೆಲವೊಮ್ಮೆ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತೆ.ಈ ಸಮಸ್ಯೆಯಿಂದ ಹೋಗಲಾಡಿಸಲು ಇಲ್ಲಿದೆ ನೋಡಿ ಪರಿಹಾರ.
ಗರ್ಭಿಣಿಯರು ಕಲ್ಲಂಗಡಿ ಹಣ್ಣನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ಆಹಾರದ ಕೊಳವೆಯು ಆರಾಮದಾಯಕವಾಗಿರುತ್ತೆ ಮತ್ತು ಹೊಟ್ಟೆಯ ಸಮಸ್ಯೆ ಇರುವುದಿಲ್ಲ. ತಂಪು ನೀಡುವ ವೈಶಿಷ್ಟ್ಯವನ್ನು ಕಲ್ಲಂಗಡಿ ಹೊಂದಿರುವುದರಿಂದ ಕೂಡಲೇ ಎದೆಯುರಿಯನ್ನು ಕಡಿಮೆಗೊಳಿಸುವ ತಾಕತ್ತು ಇದಕ್ಕಿದೆ. ಹಾಗೇ ಗರ್ಭಿಣಿಯರಿಗೆ ಕೈಕಾಲುಗಳು ಊದಿಕೊಳ್ಳುವುದು ಮತ್ತು ನೋವು ಕಾಣಿಸಿಕೊಳ್ಳವ ಸಮಸ್ಯೆಯನ್ನು ಕೂಡ ಈ ಹಣ್ಣು ನಿವಾರಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ