ಬೆಂಗಳೂರು : ನಾವು ಆರೋಗ್ಯವಾಗಿರಲೆಂದು ಪ್ರತಿದಿನ ತಿನ್ನುವ ಆಹಾರಪದಾರ್ಥಗಳೇ ಈಗ ನಮ್ಮ ಸಾವಿಗೆ ಕಾರಣವಾಗುತ್ತಿದೆ. ಅದರಲ್ಲೀ ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಈ ಅಂಶ ಹೆಚ್ಚಾಗಿದ್ದರೆ ನಮಗೆ ಸಾವು ಕಟ್ಟಿಟ್ಟ ಬುತ್ತಿ ಎಂಬುದು ಇದೀಗ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಹೌದು. ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ಉಪ್ಪಿನಂಶ ಹೆಚ್ಚಾಗಿದ್ದರೆ ನಾವು ಸಾವನಪ್ಪುತ್ತೇವೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ತಾವು ಖರೀದಿಸಿದ ಉತ್ಪನ್ನಗಳು ಅಥವಾ ಸೇವಿಸುವ ಆಹಾರ ಪದಾರ್ಥದಲ್ಲಿ ಉಪ್ಪಿನ ಪ್ರಮಾಣ ಜಾಸ್ತಿಯಾದ ಪಕ್ಷದಲ್ಲಿ ರಕ್ತದೊತ್ತಡ ಏರುಪೇರಾಗಿ ಈ ಸಾವುಗಳು ಸಂಭವಿಸುತ್ತಿವೆ ಎನ್ನಲಾಗಿದೆ.
ಶುಗರ್ ನಿಯಂತ್ರಿಸುವ ಬರದಲ್ಲಿ ಉಪ್ಪಿನ ಬಗ್ಗೆ ನಿರ್ಲಕ್ಷ್ಯ ತೋರಿ ನಾವು ಸಾವಿಗೆ ತುತ್ತಾಗುತ್ತಿದ್ದೇವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.