ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಪರೀಕ್ಷೆ ಬರೆಯಲು ಹೋಗುವ ಮೊದಲು ಅವರಿಗೆ ಮೊಸರಿಗೆ ಸಕ್ಕರೆ ಹಾಕಿ ತಿನ್ನಿಸುವ ಸಂಪ್ರದಾಯ ಕೆಲವು ಕಡೆ ಇದೆ. ಕಾರಣ ಇದನ್ನು ತಿಂದ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುತ್ತಾರೆ ಎಂಬ ನಂಬಿಕೆ. ಇದು ಕೆಲವರಿಗೆ ಮೂಢನಂಬಿಕೆ ಎನಿಸಿದರೂ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದೆ.
ಸಕ್ಕರೆ ಮತ್ತು ಮೊಸರು ಮಿಕ್ಸ್ ಮಾಡಿ ತಿನ್ನುವುದರಿಂದ ಬೇಗನೆ ಹಸಿವು ಆಗುವುದಿಲ್ಲ, ಆದ್ದರಿಂದ ಮಾಡುವ ಕೆಲಸದತ್ತ ಗಮನ ಹರಿಸಬಹುದು, ಬೇಗನೆ ಬಳಲಿಕೆ ಉಂಟಾಗುವುದಿಲ್ಲ. ಇದರಿಂದ ಮಕ್ಕಳು ಪರೀಕ್ಷೆ ಬರೆಯುವಾಗ ಯಾವುದೇ ದೈಹಿಕ ಬಳಲಿಕೆ ಇಲ್ಲದೆ, ಸರಾಗವಾಗಿ ಪರೀಕ್ಷೆ ಬರೆದು ಮುಗಿಸಬಹುದು. ಆದ್ದರಿಂದಲೇ ಪರೀಕ್ಷೆಗೆ ಹೋಗುವ ಮುನ್ನ ಮೊಸರಿನಲ್ಲಿ ಸಕ್ಕರೆ ಹಾಕಿ ನೀಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ