ಬೆಂಗಳೂರು : ಮಧುಮೇಹ ನಿಯಂತ್ರಣಕ್ಕೆ ಬರಲು, ಬೊಜ್ಜು ಕರಗಿಸಲು ಸೋರೆಕಾಯಿ ಜ್ಯೂಸ್ ಉತ್ತಮ ಮನೆಮದ್ದು ಎಂದು ಹೇಳುತ್ತಾರೆ. ಆದರೆ ಆರೋಗ್ಯವೆಂದು ನಾವು ಕುಡಿಯುವ ಈ ಸೋರೆಕಾಯಿ ಜ್ಯೂಸ್ ಕೆಲವೊಮ್ಮೆ ವಿಷವಾಗಿ ನಮ್ಮ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತದೆ.
ಹೌದು. ಸೋರೆಕಾಯಿ ಕಹಿಯಾಗಿದ್ದರೆ ಆ ಸೋರೆಕಾಯಿಯಿಂದ ಅಡುಗೆ ಅಥವಾ ಜ್ಯೂಸ್ ಮಾಡದೇ ಇರುವುದೇ ಉತ್ತಮ . ಯಾಕೆಂದರೆ ಸೋರೆಕಾಯಿ ಕಹಿಯಾಗಿದ್ದರೆ ಅದರಲ್ಲಿ Tetracyclic Triterpenoid Cucurbitacin ಎಂಬ ವಿಷಾಂಶವಿರುತ್ತದೆ. ಇದು ನಮ್ಮ ದೇಹವನ್ನು ಸೇರಿದರೆ ವಾಂತಿಯಾಗಿ ಸಾವು ಸಂಭವಿಸುವುದು. ಅದೇರೀತಿ ಸೌತೆಕಾಯಿ ಹಾಗೂ ಕುಂಬಳಕಾಯಿ ಇವುಗಳಲ್ಲೂ ಕಹಿ ಅಂಶವಿದ್ದರೆ ಅವುಗಳನ್ನು ತಿನ್ನಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ